ರಾಣೆಬೇನ್ನೂರು: ಚಲಿಸುತ್ತಿದ್ದ ಬಸ್ ಗೆ ಕಿಯಾ ಕಾರೊಂದು ಡಿಕ್ಕಿ ಹೊಡೆದು ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಒರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕುಮಾರಪಟ್ಟಣಂ ಬಳಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಮೃತರನ್ನ ದಾವಣಗೆರೆ ಮೂಲದ ಪ್ರವೀಣ ಗಿರೀಶ(30) ಹಾಗೂ ಇನ್ನೊರ್ವ ಮೃತನ ಗುರುತು ಪತ್ತೆಯಾಗಿಲ್ಲ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆ ಸೇರಿದ ದಾವಣಗೆರೆ ಮೂಲದ ಕೊಟ್ರೇಶ ಅಬಲೂರು ಎಂದು ಗುರುತಿಸಲಾಗಿದೆ.
ಅಥಣಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಕಿಯಾ ಕಾರು ರಭಸದಿಂದ ಬಂದು ಡಿಕ್ಕಿ ಹೊಡೆದು ಹಿನ್ನೆಲೆ ಭೀಕರ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಕುಮಾರಪಟ್ಟಣಂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ