ರಾಣೆಬೇನ್ನೂರ: ಪಂಚರ್ ಆಗಿ ನಿಂತಿದ್ದ ಟ್ರ್ಯಾಕ್ಟರ್ ನ ಟ್ರೇಲರ್ ಗೆ ಟಾಟಾ ಸುಪ್ರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೆ ಮೃತಪಟ್ಟು 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಾಲೂಕಿನ ಕಾಕೋಳ ಗ್ರಾಮದ ಬಳಿ ಎನ್ಎಚ್ -48 ರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರ ನಿವಾಸಿಗಳಾದ ಚಮನಸಾಬ ಬಕ್ಷುಸಾಬ ಕೆರಿಮತ್ತಿಹಳ್ಳಿ (65), ಮಾಬುಸಾಬ ಜಮಾಲಸಾಬ ದೊಡ್ಡಗುಬ್ಬಿ (65), ನಿಂಗಮ್ಮ ಹನುಮಂತಪ್ಪ ಜಿಗಳೇರ (70) ಮೃತರು. 20ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇವರು ಟಾಟಾ ಸುಪ್ರೋ ವಾಹನದಲ್ಲಿ ಹಾವೇರಿಯ ತಾಲೂಕಿನ ವೆಂಕಟಾಪುರ ಗ್ರಾಮಕ್ಕೆ ಬಿಗರ ಊಟಕ್ಕೆ ಹೋಗಿ ವಾಪಸ್ ಬರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಮೆಕ್ಕೆಜೋಳ ಹೇರಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಡಿಕ್ಕಿ ಹೊಡಿದಿದೆ.
ಇದರಿಂದ ಸ್ಥಳದಲ್ಲಿಯೆ ಮೂವರು ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದಾರೆ. ಟಾಟಾ ಸುಪ್ರೋ ವಾಹನದಲ್ಲಿ ಅಧಿಕ ಜನರನ್ನು ಹೇರಿದ್ದರಿಂದ ವಾಹನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಟಾಟಾ ಸುಪ್ರೋ ವಾಹನ ಸಂಪೂರ್ಣ ನುಜ್ಜು ನುಜ್ಜಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..