ರಾಣೆಬೇನ್ನೂರ: ಚಿಕನ್ ಬಿರಿಯಾನಿ ಅಂದ್ರೆ ಸಾಕು ಜನರು ಬಾಯಿ ಚಪ್ಪರಿಸುತ್ತಾರೆ ಅಂತಹದರಲ್ಲಿ ಇದೀಗ ಉಚಿತ ಬಿರಿಯಾನಿ ನೀಡಲು ಸಿದ್ದರಾಮಯ್ಯ ಅಭಿಮಾನಿಗಳು ರಾಣೆಬೇನ್ನೂರ ನಗರದಲ್ಲಿ ಸಜ್ಜಾಗಿದ್ದು ಇದೀಗ ಜನರು ಕಾತುರದಿಂದ ಕಾಯುತ್ತಿದ್ದಾರೆ.
ಹೌದು ರಾಜ್ಯದ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಇತಿಹಾಸದಲ್ಲಿ ಅಧಿಕ ದಿನಗಳ ಕಾಲ(7ವರ್ಷ 239 ದಿನಗಳ) ಕಾಲ ಮುಖ್ಯಮಂತ್ರಿ ಆದ ಹಿನ್ನಲೆ ಅವರ ಅಭಿಮಾನಿಗಳು ಹಾಗೂ ಅಹಿಂದ ಸಮಾಜದ ವತಿಯಿಂದ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ.
ನಗರದ ಬಸ್ ನಿಲ್ದಾಣ ಮುಂದೆ ಸುಮಾರು ಎರಡು ಕ್ವಿಂಟಲ್ ಚಿಕನ್ ಬಿರಿಯಾನಿ ನೀಡಲು ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಹಿನ್ನಲೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಅಹಿಂದ ಅಧ್ಯಕ್ಷ ರತ್ನಾಕರ್ ಕುಂದಾಪುರ ತಿಳಿಸಿದ್ದಾರೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.