ರಾಣೆಬೆನ್ನೂರ: 8ನೇ ತರಗತಿ ವಿದ್ಯಾಥಿರ್ನಿ ಮೇಲೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಗರದ ಮೆಡ್ಲೇರಿ ರಸ್ತೆಯ ಅನುದಾನಿತ ಶಾಲೆವೊಂದರಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಶಿವಪ್ಪ ವೀರಪ್ಪ ಉಜ್ಜನಿ (40) ಕಿರುಕುಳ ನೀಡಿದ ಆರೋಪಿ.
ಈತ ಇಲ್ಲಿಯ ಬನಶಂಕರಿ ನಗರದಲ್ಲಿ ವಾಸವಾಗಿದ್ದ. ವಿದ್ಯಾಥಿರ್ನಿಯೊಬ್ಬಳಿಗೆ ವಿಶೇಷ ತರಗತಿಗೆ ಬಾ ಎಂದು ಕಳೆದ ಭಾನುವಾರದಂದು ಶಾಲೆಗೆ ಕರೆಯಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿದ್ಯಾಥಿರ್ನಿಯು ಮನೆಯಲ್ಲಿ ಸಮಸ್ಯೆ ಹೇಳಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯಾಥಿರ್ನಿ ದೂರು ನೀಡುತ್ತಿದ್ದಂತೆ ಆರೋಪಿ ಶಿವಪ್ಪ ತಲೆಮರಿಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.