ಹಾವೇರಿ: ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದ್ದು,ಹೈಕಮಾಂಡ್ ಏನು ಹೇಳುತ್ತದೆ ಅದನ್ನು ನಾನ ಕೇಳುತ್ತೆನೆಂದು ಎಂದು ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಹಾವೇರಿಯಲ್ಲಿ ನಡೆಯಿತು.
ಹಾವೇರಿಯಲ್ಲಿ ನಡೆಯುತ್ತಿರುವ ಸರ್ಕಾರದ ಭೂ ಗ್ಯಾರಂಟಿ ಯೋಜನೆ ಸಮಾವೇಶಕ್ಕೆ ಆಗಮಿಸಿ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸೂತಕದ ಸಾಧನಾ ಸಮಾವೇಶ ಎಂಬ ಬಿಜೆಪಿ ಹೇಳುತ್ತಿದೆ ಆದರೆ ನಾವು
ಏನು ಮಾತು ಕೊಟ್ಟಿದೆವಿ ಅದರಂತೆ ನಡೆದಿದ್ದೆವೆ.
ಬಡವರಿಗೆ,ದಲಿತರಿಗೆ ಆರ್ಥಿಕ,ಸಾಮಾಜಿಕ ಶಕ್ತಿ ತುಂಬುವ ಕೆಲಸ ಇದಾಗಿದೆ. ಸರ್ಕಾರ ಮುಂದೆಯೂ ಸಹ ಈ ಕೆಲಸ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿಯವರು ಏನು ಮಾಡಿದರು ನಾಲ್ಕು ವರ್ಷ ಎಂಬುದು ನೀವು ನೋಡಬೇಕು.
2018 ರಲ್ಲಿ 600 ಭರವಸೆ ಕೊಟ್ಟಿದ್ದರು,ಅದರಲ್ಲಿ 10% ಭರವಸೆ ಕೊಟ್ಟಿಲ್ಲ.
ಅವರಿಗೆ ಏನ್ ನೈತಿಕತೆ ಇದೆ ಎಂಬುದನ್ನು ನೋಡಿಕೊಳ್ಳಲು ಹೇಳಿ. ನಾವು ನೀಡಿದ
593 ಭರವಸೆಯಲ್ಲಿ ನಾವು 292 ಭರವಸೆ ಈಡೇರಿಸುತ್ತೇವೆ.ಅವರು ಮಾಡಿದ ಆರೋಪಗಳು ಸುಳ್ಳು ಎಂದರು.
ನಮ್ಮ ಪಾರ್ಟಿಯಲ್ಲಿರೊ ಎಲ್ಲರೂ ಹೈಕಮಾಂಡ್ ಹೇಳಿದಂತೆ ಕೇಳೊದು.
ಡಿಕೆಶಿ ಶ್ರಮಕ್ಕೆ ಫಲ ಸಿಗುತ್ತೆ ಎಂಬ ಟ್ವೀಟ್ ವಿಚಾರ.
ಯಾರು ಮಾಡಿದಾರೆ,ನಮ್ಮ ಹೈಕಮಾಂಡ್ ಏನಾದರೂ ಟ್ವೀಟ್ ಮಾಡಿದಾರಾ?
*ಯತೀಂದ್ರ ಹೇಳಿಕೆಯ ವಿಚಾರ.*
ರೀ ಅದಕ್ಕೆಲ್ಲ ನಾನು ಉತ್ತರ ಕೊಡೊಲ್ಲಾ ರಿ.
ಅವರೇನೂ ಹೇಳ್ತಾರೆ ಅದಕ್ಕೇಲ್ಲ ಉತ್ತರ ಕೊಡೊಲ್ಲ ನಾನು.
ಆ ಪ್ರಶ್ನೆ ಕೇಳಬೇಡಿ.
ಡಿಕೆಶಿ ಬಗ್ಗೆ ಕೇಳುತ್ತಿದ್ದಂತೆಯೆ ಸಿಡಿಮಿಡಿಯಾದ ಸಿದ್ದರಾಮಯ್ಯ.
ಡಿಕೆಶಿ ಹೇಳಿಕೆಗೆ ನೊ ಕಮೆಂಟ್ ಎಂದು ತಲೆ ಅಲ್ಲಾಡಿಸಿದ ಸಿಎಂ.
ಅದರ ಬಗ್ಗೆ ನಾವೇಲ್ಲ ಉತ್ತರ ಕೊಡೊದಕ್ಕೆ ಆಗೊಲ್ಲ.
ಹೈಕಮಾಂಡ್ ಏನ್ ಹೇಳುತ್ತೊ ಅದಕ್ಕೆ ಬದ್ಧ

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.