ರಾಣೆಬೇನ್ನೂರ: ಕಾಂಗ್ರೆಸ್ ಪಕ್ಷವು ಹಿಂದುಳಿದ,ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಅಧಿಕಾರ ನೀಡಿದ್ದು, ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದ ಸಲ್ಲದು ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟಪ್ಪ, ಕೃಷ್ಣಪ್ಪ ಹಾಗೂ ಶಶಿಧರ ಅವರಿಗೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ.
ನನಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಶಶಿಧರ ಅವರಿಗೆ ನಾಲ್ಕು ಬಾರಿ ನಗರಸಭೆ ಟಿಕೆಟ್ ನೀಡಿ ಸದಸ್ಯರನ್ನಾಗಿ ಮಾಡಿದ್ದಾರೆ.
ಮಾಜಿ ಶಾಸಕ ಅರುಣಕುಮಾರ ಮಾತನಾಡುವುದದ್ದರೆ ಸರಿಯಾಗಿ ಮಾತನಾಡಬೇಕು. ಟೀಕೆ ಮಾಡುವಾಗ ಅದನ್ನು ಮುಂದೆ ತಿದ್ದಿಕೊಳ್ಳುವ ರೀತಿಯಲ್ಲಿ ಮಾತಬೇಕು. ಅದನ್ನು ಬಿಟ್ಟು ಬೇರೆ ರೀತಿ ಮಾಡಿದರೆ ಮುಂದೆ ಪರಿಣಾಮ ಸರಿಯಾಗಿ ಇರುವುದಿಲ್ಲ.
ಜನರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಹಾಗೂ ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಅದರ ಬಗ್ಗೆ ತರಕಾರು ಇದ್ದರೆ ಅರುಣಕುಮಾರ ಮಾತನಾಡಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಮಾತುಗಳನ್ನು ಹೇಳಿದರೆ ಅದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ ಮಾತನಾಡಿ, ಕೆ.ಬಿ. ಕೋಳಿವಾಡರು ನನಗೆ ಜಿಪಂ ಟಿಕೆಟ್ ಕೊಡಿಸಿ ಆಯ್ಕೆ ಮಾಡಿಸಿದ್ದರು. ಕಾಂಗ್ರೆಸ್ ನಲ್ಲಿ ಹಲವಾರು ಹುದ್ದೆ ನೀಡಿ ನಮಗೆ ಬೆಂಬಲ ನೀಡಿದ್ದಾರೆ. ಕೆಲಸ ಮಾಡಿದ ಎಲ್ಲ ಮುಖಂಡರನ್ನು ಕಾಂಗ್ರೆಸ್ ನಲ್ಲಿ ಗುರುತಿಸಿದ್ದಾರೆ. ಆದರೆ ವಿರೋಧ ಪಕ್ಷದವರು ಅಭಿವೃದ್ಧಿ ಕೆಲಸ ಬಗ್ಗೆ ಕೇಳುವ ಬದಲು ವೈಯಕ್ತಿಕ ತೇಜೋವದೆ ಮಾಡುವುದು ಸರಿಯಲ್ಲ ಎಂದರು.
ನಗರಸಭೆ ಸದಸ್ಯ ಶಶಿಧರ ಬಸೇನಾಯ್ಕರ ಮಾತನಾಡಿ, ಬಿಜೆಪಿ ತಂದೆ ತಾಯಿ ಇಲ್ಲದ ಪಕ್ಷ. ಹೀಗಾಗಿ ಅವರು ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಕುಂದರುತ್ತಾರೆ. ನಮ್ಮನ್ನು ತಂದೆ ತಾಯಿ ಇರುವ ಪಕ್ಷ. ಶಿಸ್ತಿಗೆ ಸಂಬಂಧಿಸಿ ಯಾರೂ ಮಾತನಾಡುತ್ತಾರೆ ಅವರು ಇರುತ್ತಾರೆ. ನಿಂಗರಾಜ ನಮ್ಮ ಬಗ್ಗೆ ಟೀಕೆ ಮಾಡುವಾಗ ಹುಷಾರಿಂದ ಇರಬೇಕು. ಬೆಳೆಯುವ ವಯಸ್ಸಿನಲ್ಲಿ ಸಮಸ್ಯೆ ಮಾಡಿಕೊಂಡರೆ ಅವರಿಗೆ ತೊಂದರೆ ಆಗುತ್ತದೆ ಎಂದರು.
ಪ್ರಮುಖರಾದ ಚಂದ್ರಣ್ಣ ಬೇಡರ, ಕರಬಸಪ್ಪ ಕೂಲೇರ, ರವೀಂದ್ರಗೌಡ ಪಾಟೀಲ, ಶಶಿಧರ ಬಸೇನಾಯ್ಕರ, ಬೀರಪ್ಪ ಲಮಾಣಿ, ಸಿದ್ದಪ್ಪ ಅಂಬಲಿ, ಶೇರುಖಾನ ಖಾಬೂಲಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.
ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!