ಹಾನಗಲ್: ಪಹಣಿ ದುರಸ್ತಿಗೆ ಮಾಡಿಕೊಡಲು ಲಂಚ ಸ್ವೀಕಾರ ಮಾಡುತ್ತಿದ್ದ ಹಾನಗಲ್ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ಹಾಗೂ ಕೇಸ್ ವರ್ಕರಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನವೀನ ಬಸನಗೌಡ ಪಾಟೀಲ್ ಎಂಬುವರು ತಮ್ಮ ಪರಿಚಯಸ್ಥರಾದ ಶಂಕ್ರಪ್ಪ ಈರಪ್ಪ ಗುಮಗುಂಡಿ ರವರ ಕೆ.ಡಿ.ಟಿ ಪ್ರಕಾರ ದುರಸ್ಥಿ ಮಾಡಿಕೊಡಲು ಹಾನಗಲ್ ತಹಶೀಲ್ದಾರ ಕಛೇರಿಯ ತಮ್ಮಣ್ಣ ಕಾಂಬಳೆ, ಶಿರಸ್ತೆದಾರರು ಹಾಗೂ ಗೂಳಪ್ಪ ಮನಗೂಳಿ, ದ್ವಿ.ದ.ಸ ರವರು ರೂ 12,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಇಂದು ಫಿರ್ಯಾದುದಾರರಿಂದ 12,000 ರೂಲಂಚದ ಹಣವನ್ನು ಪಡೆದುಕೊಳ್ಳುವಾ ಟ್ರ್ಯಾಪ್ ಮಾಡಿದ್ದಾರೆ.
ಪ್ರಕರಣದ ಆರೋಪಿತರಿಗೆ ಸಹಕರಿಸಿದ ಮತ್ತೊಬ್ಬ ಆರೋಪಿತರಾದ ಶಿವಾನಂದ ಬಡಿಗೇರ, ದ್ವಿ.ದ.ಸ ರವರನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಸದರಿ ಪ್ರಕರಣದ ತನಿಖೆಯನ್ನು ಮಾನ್ಯ ಎಮ್ ಎಸ್ ಕೌಲಾಪುರೆ, ಎಸ್.ಪಿ, ಕಲೋ ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಕೈಗೊಂಡು, ಶ್ರೀ ಮಧುಸೂದನ ಸಿ, ಡಿವೈಎಸ್‌ಪಿ ಕರ್ನಾಟಕ ಲೋಕಾಯುಕ್ತ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಶ್ರೀ ದಾದಾವಲಿ ಕೆ ಎಚ್, ಪೊಲೀಸ್ ನಿರೀಕ್ಷಕರು ಶ್ರೀ ವಿಶ್ವನಾಥ ಕದ್ದೂರಿ ಪೊಲೀಸ್ ನಿರೀಕ್ಷಕರು, ಶ್ರೀ ಪಿ ವಿ ಸಾಲಿಮಠ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಸದರಿ ಆರೋಪಿತರನ್ನು ಹಾನಗಲ್ ತಹಶೀಲ್ದಾರ ಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*
ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..