ರಾಣೆಬೇನ್ನೂರು: ನಗರಸಭೆ ಶನಿವಾರ ಕರೆದಿದ್ದ ನಗರಸಭೆ ಸಾಮಾನ್ಯ ಸಭೆಯು ಕೋರಂ ಅಭಾವದಿಂದ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಸಾಮಾನ್ಯ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ನಗರಸಭೆಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ
ಬೆಳಗ್ಗೆ 11ಕ್ಕೆ ಸಭೆ ಕರೆಯಲಾಗಿತ್ತು. ಸದಸ್ಯರ ಬರುವಿಕೆಯ ನಿರೀಕ್ಷೆಯಲ್ಲಿ 11.30ಕ್ಕೆ ಸಭೆಯನ್ನು ಅಧ್ಯಕ್ಷೆ ಚಂಪಕಾ ಪ್ರಾರಂಭಿಸಿದರು. ಆಗ ಆಡಳಿತ ಕಾಂಗ್ರೆಸ್ ಪಕ್ಷದ 9 ಸದಸ್ಯರ ಪೈಕಿ 8 ಸದಸ್ಯರು (ಅಧ್ಯಕ್ಷೆ ಸೇರಿದಂತೆ) ಹಾಗೂ 4 ನಾಮಕರಣ ಸದಸ್ಯರು ಹಾಜರಿದ್ದರು. ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು ಕೋರಂ ಭರ್ತಿಗೆ 13 ಸದಸ್ಯರ ಹಾಜರಾತಿ ಅಗತ್ಯವಿತ್ತು. ಆದರೆ ಸಭೆಯಲ್ಲಿ ಕೇವಲ 8 ಸದಸ್ಯರು ಮಾತ್ರ ಹಾಜರಿದ್ದರು. (ನಾಮಕರಣ ಸದಸ್ಯರನ್ನು ಕೋರಂಗೆ ಪರಿಗಣಿಸುವುದಿಲ್ಲ). 11.50ರ ವರೆಗೂ ಕಾಯ್ದರೂ ಕೋರಂ ಭರ್ತಿಯಾಗದ ಕಾರಣ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಸಭೆಯನ್ನು ಒಂದು ಗಂಟೆ ಮುಂದೂಡಿದರು.
ಕೋರಂ ಅಭಾವದ ಕಾರಣ ಮುಂದೂಡಲಾಗಿದ್ದ ಸಭೆಯನ್ನು ಎರಡನೇ ಬಾರಿಗೆ ಮಧ್ಯಾಹ್ನ 1.20ಕ್ಕೆ ಪ್ರಾರಂಭಿಸಲಾಯಿತು. ಆಗಲೂ ಕೂಡ ಕೋರಂ ಭರ್ತಿಯಾಗಲಿಲ್ಲ. ವಿಪರ್ಯಾಸವೆಂದರೆ ಬೆಳಗಿನ ಅವಧಿಯಲ್ಲಿ ಹಾಜರಿದ್ದ ಆಡಳಿತ ಪಕ್ಷದ ಸದಸ್ಯೆ ಜಯಶ್ರೀ ಪಿಸೆ ಈ ಬಾರಿ ಗೈರಾಗಿದ್ದರು. ಇದಲ್ಲದೆ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಸದಸ್ಯೆ ನೀಲಮ್ಮ ಮಾಕನೂರ ಮೊದಲಿನ ಹಾಗೂ ಮುಂದೂಡಿದ ಸಭೆಗೆ ಆಗಮಿಸಲಿಲ್ಲ. ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸೇರಿದಂತೆ 27 ಚುನಾಯಿತ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಅಧ್ಯಕ್ಷರು ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸಭೆ ಮುಂದೂಡಿಕೆಯಾದ ನಂತರ ಆಡಳಿತ ಪಕ್ಷದ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಸಭೆಯಲ್ಲಿ ನಗರದ ಅಭಿವೃದ್ಧಿ ಹಾಗೂ ಕೆಲವು ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡುವ ಕುರಿತು ನಿರ್ಣಯ ಕೈಗೊಳ್ಳುವ ಕುರಿತು ಅಜೆಂಡಾ ರೂಪಿಸಲಾಗಿತ್ತು. ಆದರೆ ನಮಗೆ ಇದುವರೆಗೂ ಸಹಕಾರ ನೀಡಿದ್ದ ಬಿಜೆಪಿ ಸದಸ್ಯರು ಇಂದಿನ ಸಭೆಗೆ ಗೈರು ಹಾಜರಾಗಿದ್ದು ಅದಕ್ಕೆ ಅವಕಾಶವಿಲ್ಲದಂತಾಗಿದೆ. ಇದನ್ನು ಗಮನಿಸಿದರೆ ಬಿಜೆಪಿ ಸದಸ್ಯರಿಗೆ ನಗರದ ಅಭಿವೃದ್ಧಿಗೆ ಇಷ್ಟವಿಲ್ಲದಂತೆ ಕಾಣುತ್ತದೆ ಎಂದರು.
More Stories
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*
ತಾಪಂ ಪ್ರಭಾರ ಇಓ ಬಸವರಾಜ ಶಿಡೇನೂರ ಬಳಿ ಒಂದೂವರೆ ಕೋಟಿ ಆಸ್ತಿ..