ರಾಣೆಬೆನ್ನೂರ:ಆರ್ ಎಸ್ ಎಸ್ ಸಂಘಕ್ಕೆ ನೂರು ವರ್ಷಗಳು ತುಂಬಿದ ಪ್ರಯುಕ್ತ ರವಿವಾರದಂದು ನಗರದಲ್ಲಿ ಸಹಸ್ರಾರು ಸೇವಕರೊಂದಿಗೆ ಬೃಹತ್ ಪ್ರಮಾಣದಲ್ಲಿ ಕಿಲೋಮೀಟರ್ ಗಟ್ಟಲೇ ಉದ್ದದ
ಅರ್ ಎಸ್ ಎಸ್ ಪಥ ಸಂಚಲನವು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿಯಾಗಿ ನೆರವೇರಿತು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಕಾಶ ಬುರಡಿಕಟ್ಟಿ, ಮಂಜಯ್ಯ ಚಾವಡಿ, ಗದಿಗೆಪ್ಪ ಹೊಟ್ಟಿಗೌಡ್ರ, ಸಿದ್ದಣ್ಣ ಚಿಕ್ಕಬಿದರಿ, ಗಣೇಶ ಪವಾರ, ಅಮೋಘ ಬಾದಾಮಿ, ಗವಿಸಿದ್ದಪ್ಪ ದ್ಯಾಮಣ್ಣನವರ,ಡಾ.ಬಸವರಾಜ ಕೇಲಗಾರ, ಪೃಥ್ವಿ ರಾಜ ಜೈನ್, ಪಾಂಡುರಂಗ ಪೂಜಾರ, ಶ್ರೀನಿವಾಸ ಏಕಬೋಟೆ, ವಿನಯ ಬಾಳನಗೌಡ್ರ, ರಮೇಶ ಗುತ್ತಲ, ಮಲ್ಲಣ್ಣ ಅಂಗಡಿ, ನಾಗರಾಜ ಕುಲಕರ್ಣಿ, ಸಂತೋಷ ತೆವರಿ, ಜಗದೀಶ ಎಲಿಗಾರ, ಆರ್.ಟಿ.ತಾಂಬೆ, ಅನಿಲ ಭೂತೆ, ಭರಮಪ್ಪ ಉರ್ಮಿ, ನಾಗರಾಜ ಪಾಟೀಲ, ಪ್ರಭು ಮುಂಡಾಸದ, ಕೆ.ಶಿವಲಿಂಗಪ್ಪ,ಮೌನೇಶ ತಳವಾರ, ಡಾ. ಚಂದ್ರಶೇಖರ ಕೇಲಗಾರ, ಜಗದೀಶ ಅಂಕಲಕೋಟೆ, ನಾಗರಾಜ ಪಾಟೀಲ, ಸಂಜೀವ ಶಿರಹಟ್ಟಿ, ಷಣ್ಮುಖ ಕೆ.ಎನ್.,ಮಂಜುನಾಥ ಗೌಡಶಿವಣ್ಣನವರ, ನಾಗರಾಜ ಸೊಪ್ಪಿನ, ಯಲಲಿಂಗ, ಯುವರಾಜ ಬ್ಯಾಡಗಿ, ಯುವರಾಜ ಬಾರಟಕ್ಕೆ, ಪ್ರಕಾಶ ಪೂಜಾರ ಸೇರಿದಂತೆ ಸಹಸ್ರಾರು ಸೇವಕರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪಥ ಸಂಚಲನಕ್ಕೆ ಭಾರತಿ ಜಂಬಗಿ ಸಂಗಡಿಗರು ಪೂಜೆ ಸಲ್ಲಿಸಿದರು. ಅಶೋಕ ವೃತ್ತದಿಂದ ಆರಂಭವಾದ ಸಂಚಲನವು ಅಂಚೆ ವೃತ್ತ, ಸಂಗಮ್ ವೃತ್ತ, ತಳವಾರ ಓಣಿ, ದೊಡ್ಡಪೇಟೆ ರಸ್ತೆ, ಎಂಜಿ ರಸ್ತೆ, ಕುರುಬಗೇರಿ ಕ್ರಾಸ್, ಪಿಬಿ ರಸ್ತೆಯ ಮೂಲಕ ಸಂಚಲನವು ಕ್ರೀಡಾಂಗಣಕ್ಕೆ ತಲುಪಿತು.
ಸಂಚಲದ ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂ ಮಳೆ ಸುರಿಸಿ, ರಂಗೋಲಿ ಬಿಡಿಸಿ ಜೈ ಶ್ರೀರಾಮ್ ಘೋಷಣೆಯ ಮೂಲಕ ಹರ್ಷೋದ್ಗಾರ ವ್ಯಕ್ತಪಡಿಸಿದರು. ಪುಠಾಣಿ ಮಕ್ಕಳು ಗಣವೇಷಧಾರಿಗಳಾಗಿ ಹಾಗೂ ಭಾರತಮಾತೆಯ ವೇಷ ಧರಿಸಿದ ಯುವತಿಯರು ಎಲ್ಲರ ಗಮನ ಸೆಳೆದರು. ಎಸ್ಪಿ ಯಶೋದಾ ಮಂಟಗುಡಿ, ಡಿವೈಎಸ್ಪಿ ಜೆ.ಲೋಕೇಶ ನೇತ್ರತ್ವದಲ್ಲಿ ಪಥ ಸಂಚಲನಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.