ರಾಣೆಬೇನ್ನೂರು: ಶಾಸಕರಾಗಿ ಎರಡು ವರ್ಷದಲ್ಲಿ ಎಷ್ಟು ಬಾರಿ ರಾಣೆಬೇನ್ನೂರು ನಗರದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗೆ ಹಾಗೂ ಅಹಿಂದ ನಾಯಕರ ಜಯಂತಿಗೆ ಹಾಜರಾಗಿಪಾ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಶಾಸಕ ಪ್ರಕಾಶ ಕೋಳಿವಾಡರವರಿಗೆ ಪ್ರಶ್ನೆ ಮಾಡಿದರು.
ನಗರದ ಭಾಜಪ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕನ ಆದೇಶ ಮೇರೆಗೆ ದಲಿತ ಹಾಗೂ ಅಹಿಂದ ಸಮುದಾಯದ ವಿರೋಧಿ ಮಾಜಿಶಾಸಕ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಆದರೆ ಅವರಿಗೆ ನಿಜವಾದ ದಲಿತ ವಿರೋಧಿ ಯಾರು ಎಂಬುದನ್ನು ಸ್ವಲ್ಪ ಅವರ ಮಾಡಿರುವು ಕೆಲಸದ ಬಗ್ಗೆ ಗಮನಹರಿಸಿ ನೋಡಲಿ. ತಾಲೂಕಿನಲ್ಲಿ ಎರಡು ಬಾರಿ ಅಂಬೇಡ್ಕರ್ ಜಯಂತಿ ನಡೆದಿದೆ ಆದರೆ ನೀವು ಎಷ್ಟು ಬಾರಿ ಹಾಜರಾಗಿದ್ದಿರಿ ಎಂಬುದನ್ನು ಇಲ್ಲಿ ನೋಡಿ ಎಂದು ಅಂಬೇಡ್ಕರ್ ಜಯಂತಿಯ ಭಾವಚಿತ್ರ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ತಾಲೂಕಿನಲ್ಲಿ ಅಹಿಂದ ಸಮುದಾಯಕ್ಕೆ ನಾನು ಏನು ಮಾಡಿದ್ದೇನೆ ಎಂಬುದನ್ನು ಚರ್ಚೆ ಮಾಡಬೇಕಾರೆ ನೀವು ನೇರಾನೇರ ವೇದಿಕೆ ಸಿದ್ದತೆ ಮಾಡಿಕೊಂಡು ಚರ್ಚೆ ಮಾಡೋಣ ಬನ್ನಿ. ಅದನ್ನು ಬಿಟ್ಟು ಎಲ್ಲೊ ದೂರು ಕೂತು ಚಿಲ್ಲರ ರಾಜಕಾರಣ ಮಾಡೋಕೆ ನಮಗೆ ಬರಲ್ಲ ಎಂದು ಶಾಸಕರಿಗೆ ಮಾತಿನಲ್ಲಿ ತಿವಿದರು.
ನಗರಸಭೆ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಗೈರಾಗಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು ಐವತ್ತು ವರ್ಷದಿಂದ ಬಿಜೆಪಿ ಕಾರ್ಯಾಲಯ ಎಂದು ಗುರುತಿಸಿಕೊಂಡು ಬಂದಿದೆ. ಆದರೆ ದ್ವೇಷದ ರಾಜಕಾರಣದಿಂದ ಕಾಂಗ್ರೆಸ್ ಅಧ್ಯಕ್ಷರದಿಂದ ನಮ್ಮ ಕಚೇರಿಯ ಮೇಲೆ ನ್ಯಾಯಲಯದಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆ ನಮ್ಮ ಎಲ್ಲಾ ಮುಖಂಡರ ಹಾಗೂ ಸದಸ್ಯರ ಒಮ್ಮತದ ಮೇರೆಗೆ ಅಂದು ನಾವು ಸಾಮಾನ್ಯ ಸಭೆಗೆ ಗೈರಾಗಿದ್ದೆವೆ ಹೊರತು ಅಭಿವೃದ್ಧಿಗೆ ಹಿನ್ನಡೆ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಅದನ್ನೆ ಇವರು ಬಂಡವಾಳ ಮಾಡಿಕೊಂಡು ದಲಿತ ವಿರೋಧಿ, ಅಹಿಂದ ವಿರೋಧಿ ಎಂದು ಜಾಲತಾಣದಲ್ಲಿ ಹಾಕುತ್ತಿದ್ದಾರೆ.
ಅದನ್ನು ಬಿಟ್ಟು ಬೇರೆ ವಿಷಯ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.
ಇನ್ನೂ ತಾಲೂಕಿನ ತುಂಬ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರಿಂದ ಮಾಮೂಲಿ ಪಡೆದು ಅದನ್ನು ಬೆಂಗಳೂರಿಗೆ ಸಾಗಿಸುತ್ತಿರುವುದು ಈಡಿ ರಾಣೆಬೇನ್ನೂರು ತಾಲೂಕಿನ ಜನತೆಗೆ ತಿಳಿದಿರುವ ವಿಚಾರ. ಅಂತಹ ಅಕ್ರಮ ಚಟುವಟಿಕೆಗಳ ಬಂದ್ ಮಾಡಿಸುವ ರಾಜಕಾರಣ ಮಾಡಲಿ ಅದನ್ನು ಬಿಟ್ಟು ಇಂತಹ ದ್ವೇಷದ ರಾಜಕಾರಣ ಮಾಡಬೇಡಿ. ನಿಮ್ಮ ತಂದೆಯವರ ಕಾಲದ ರಾಜಕಾರಣ ನೋಡಿ ರಾಜಕೀಯ ಮಾಡಿ ಅದನ್ನು ಬಿಟ್ಟು ಹೇಳಿಕೆ ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಘಟಕ ಅಧ್ಯಕ್ಷ ಮಂಜಣ್ಣ ಕಾಟಿ, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ, ರೂಪಾ ಚಿನ್ನಿಕಟ್ಟಿ, ಪ್ರಭಾವತಿ ತಿಳವಳ್ಳಿ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ಮುಖಂಡರಾದ ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಸಿದ್ದಣ್ಣ ಚಿಕ್ಕಬಿದರಿ, ಚೋಳಪ್ಪ ಕಸವಾಳ ಸೇರಿದಂತೆ ಮತ್ತಿತರರ ಹಾಜರಿದ್ದರು.
More Stories
ಕುದರಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಯುವ ಕೃಷಿಕ ಸಾವು
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.