ರಾಣೆಬೇನ್ನೂರು: ನಕಲಿ ಕಂಪನಿಯ ಹೆಸರಿನಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟ ಮಾಡಿದ್ದು ಬೀಜ ಹುಟ್ಟಿದೆ ಇರುವುದರಿಂದ ರೈತರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ನಗರದ ಪಿಬಿ ರಸ್ತೆಯಲ್ಲಿರುವ ಶಿವಂ ಸೀಡ್ಸ್, ನಿಸರ್ಗ ಸೀಡ್ಸ್, ಮರಳುಶಿದ್ದೇಶ್ವರ ಅಂಡಿಯವರು ಸುಮಾರು ನಾಲ್ಕು ಟನ್ ಕಂಪನಿಯ ಹೆಸರು ಇರುವ ಪ್ಯಾಕೆಟ್ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ನೆರೆಯ ಜಿಲ್ಲೆಯಗಳಾದ ದಾವಣಗೆರೆ, ಚಿತ್ರದುರ್ಗ, ಗದಗ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಯ ರೈತರಿಗೆ ಮಾರಾಟ ಮಾಡಿದ್ದಾರೆ. ರೈತರು ಇವುಗಳನ್ನು ತೆಗೆದುಕೊಂಡು ಉತ್ತಮವಾದ ಹದ ಹೊಂದಿರುವ ಭೂಮಿಗೆ ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಮಾಡಿ ಹದಿನೈದು ದಿನ ಕಳೆದರು ಸರಿಯಾಗಿ ಮೊಳಕೆ ಹೊಡೆದಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ರೈತರು ಬೀಜ ತೆಗೆದುಕೊಂಡು ಅಂಗಡಿಗೆ ವಿಚಾರಿಸಲು ಬಂದಿದ್ದಾರೆ. ಈ ಸಮಯದಲ್ಲಿ ನಕಲಿ ಪ್ಯಾಕೆಟ್ ಬೀಜಗಳು ಎಂಬುದು ಗೊತ್ತಾಗಿದೆ.
ಕೂಡಲೇ ರೈತರು ನಮಗೆ ನ್ಯಾಯ ಹಾಗೂ ಪರಿಹಾರ ನೀಡಬೇಕು ಎಂದು ಅಂಗಡಿ ಮಾಲೀಕರು ಮುಂದೆ ವಾಗ್ವಾದ ಮಾಡಿದ್ದಾರೆ. ನಂತರ ಮಾಲೀಕರು ನಾಳೆ ಬರುವಂತೆ ಹೇಳಿ ಇದೀಗ ಅಂಗಡಿ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವಿಷಯ ಗಮನಕ್ಕೆ ಬಂದ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆದ ಮೋಸದ ಬಗ್ಗೆ ಮಾಹಿತಿ ಪಡೆದರು.
ನಂತರ ಕೃಷಿ ಇಲಾಖೆಯ ಅಧಿಕಾರಿಗಳು ಅಂಗಡಿಯ ಮಾಲೀಕರಿಗೆ ಕರೆ ಮಾಡಿದರು ಅವರು ಲಭ್ಯವಾಗದೆ ಹಿನ್ನೆಲೆ ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ