ಹಾವೇರಿ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ದಿನ ಬುಧವಾರ ಏಳು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದುವರೆಗೆ 12 ಅಭ್ಯರ್ಥಿಗಳಿಂದ 19 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ ಹಾಲ್‌ನಲ್ಲಿ ಭಾರತೀಯರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಜಿ.ಆನಂದಸ್ವಾಮಿ ಗಡ್ಡದೇವರಮಠ ( ಪ್ರತ್ಯೇಕವಾಗಿ ಮೂರು), ಕರ್ನಾಟಕ ರಾಷ್ಟ್ರೀಯ ಸಮಿತಿ ಅಭ್ಯರ್ಥಿಯಾಗಿ ತನು ಸಿ. ಯಾದವ್ (ಒಂದು), ಸಮಾಜವಾದಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಹೆಚ್.ಕೆ ನರಸಿಂಹಪ್ಪ (ಒಂದು), ಪಕ್ಷೇತರ ಅಭ್ಯರ್ಥಿಯಾಗಿ ಜಗದೀಶ ಬಂಕಾಪೂರ (ಒಂದು) ಹಾಗೂ ಏಕಂ ಸನಾತನ ಭಾರತ ದಳ ಅಭ್ಯರ್ಥಿಯಾಗಿ ವಿಶ್ವನಾಥ್ ಶೀರಿ (ಒಂದು) ನಾಮಪತ್ರ ಸಲ್ಲಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಉಪಸ್ಥಿತರಿದ್ದರು.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.