ರಾಣೆಬೆನ್ನೂರ: ಸಮಾಜದಲ್ಲಿರುವ ದುರ್ಬಲರು, ನಿರ್ಗತಿಕರು, ಅಸಹಾಯಕರು ಸೇರಿದಂತೆ ಶ್ರೀಸಾಮಾನ್ಯರ ಅಹವಾಲುಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಿ ಕೊಡುವ ಗುರುತರವಾದ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಛಾಯಾಗ್ರಹಕ ಮಾಲತೇಶ ಅಂಗೂರ ಹೇಳಿದರು.
ಶನಿವಾರದಂದು ನಗರದ ನಿರೀಕ್ಷಣ ಮಂದಿರದಲ್ಲಿ ವಿವಿಧ ರೈತ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಅಭಿನಂದನಾ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಕರ್ತರಿಗೆ ಹಾಗೂ ಬರಹಗಾರರಿಗೆ ಅತ್ಯದ್ಭುತವಾದ ದಿವ್ಯಶಕ್ತಿ ಇದೆ. ಅಂತಹ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಬದುಕನ್ನು ಹಸನು ಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಪತ್ರಕರ್ತರಾದವರು ಮಾಡಿದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.
ತಂತ್ರಜ್ಞಾನ ಹಾಗೂ ಆಧುನಿಕತೆ ಹೆಚ್ಚಿದಂತೆಲ್ಲ ಕಾಡುಗಳು ಕಡಿಮೆಯಾಗುತ್ತಿವೆ, ಮರಗಳು ಮಾರಣ ಹೋಮಗಳಾಗುತ್ತಿವೆ, ಪರಿಸರ ಹಾಳಾಗುತ್ತಿದೆ. ಓಜೋನ್ ಪದರು ಛಿದ್ರವಾಗುತ್ತಿದೆ, ನೀರು ಕಲುಷಿತವಾಗಿದೆ. ಇಂತಹ ಸಂದರ್ಭದಲ್ಲಿ ಶುದ್ಧ ಗಾಳಿ, ಉತ್ತಮ ಪರಿಸರ ಪಡೆಯಲು ಜನಸಾಮಾನ್ಯರುನಲಗುವಂತಾಗಿದೆ.
ಪರಿಸರದ ಏರಿಳಿತದ ಪರಿಣಾಮವಾಗಿ ಕಾಡುಗಳಲ್ಲಿನ ಪ್ರಾಣಿಗಳು ನಾಡಿಗೆ ಬರುವಂತಾಗಿವೆ. ಮನುಷ್ಯ ಮತ್ತು ವನ್ಯಜೀವಿಯು ಒಂದು ಸರಪಳಿ ಇದ್ದಂತೆ. ವನ್ಯಜೀವಿ ಮತ್ತು ಪರಿಸರ ಉಳಿದರೆ ಮಾತ್ರ ಮನುಷ್ಯ ಈ ಭೂಮಿಯಲ್ಲಿ ಬದುಕುಳಿಯಲು ಸಾಧ್ಯ. ಈ ದಿಸೆಯಲ್ಲಿ ಸರ್ವರೂ ಪರಿಸರ ಸಂರಕ್ಷಣೆಗೆ ಮುಂದಾಗ ಬೇಕಿರುವುದು ಅನಿವಾರ್ಯವಾಗಿದೆ ಎಂದರು.
ಮುಂದಿನ ಪೀಳಿಗೆಯ ಹಿತ ದೃಷ್ಟಿಯಿಂದ ನಾವುಗಳಿಂದು ಪ್ಲಾಸ್ಟಿಕ್ ಅನ್ನು ತ್ಯಜಿಸಿ ಉತ್ತಮ ಗಾಳಿ, ಗುಣಮಟ್ಟದ ಆಹಾರ, ಪರಿಶುದ್ಧವಾದ ಪರಿಸರ, ಸ್ವಚ್ಚತೆಯ ವಾತಾವರಣ ಇವುಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ಸಮಸ್ತ ಜೀವಕುಲಕ್ಕೆ ಉಳಿಗಾಲವಿದೆ ಎಂದರು.
ಸರಕಾರವು ನೀಡುವ ಪ್ರಶಸ್ತಿಗಿಂತ ಆತ್ಮಪೂರ್ವಕವಾಗಿ ಹೃದಯಪೂರ್ವಕವಾಗಿ ಜನಸಾಮಾನ್ಯರು, ಸಂಘಟನೆಗಳು ನೀಡುವ ಪ್ರಶಸ್ತಿ ಅಭಿನಂದನೆ, ಸನ್ಮಾನಗಳು ಬಹು ದೊಡ್ಡದಾಗಿ ಜನಮಾನಸದಲ್ಲಿ ಉಳಿಯಲಿವೆ ಎಂದರು.
ಕಾರ್ಯಕ್ರಮದ ಸಂಯೋಜಕ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ ಮಾಲತೇಶ ಅಂಗೂರವರು ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಏಳು ಬೀಳುಗಳನ್ನು ಕಾಣುತ್ತಾ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಗಳಲ್ಲಿಯೂ ಸಹ ಅವರ ಛಾಯಾಚಿತ್ರ ಪ್ರದರ್ಶನಗಳು ಸಾಹಿತ್ಯಕ ಕೃತಿಗಳು ಪರಿಚಿತವಾಗಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಪಿಎಸ್ ಐ ಗಡ್ಡೆಪ್ಪ ಗುಂಜುಟಗಿ, ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜು ಶೀರೂರ, ಶಾಸಕರ ಆಪ್ತ ಸಹಾಯಕ ಮಹೇಶ್ ಕೆಂಚರೆಡ್ಡಿ, ರಮೇಶ್ ಪೂಜಾರ, ರೈತರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ನಿತ್ಯಾನಂದ ಕುಂದಾಪುರ, ಶಿವಪುತ್ರಪ್ಪ ಮಲ್ಲಾಡದ, ರಮೇಶ್ ಪೂಜಾರ, ಪ್ರಭಾಕರ ಶಿಗ್ಲಿ, ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ್, ಕೊಟ್ರೇಶಪ್ಪ ಎಮ್ಮಿ, ಕರಬಸಪ್ಪ ಕೂಲೇರ, ಶಿವುಕುಮಾರ ಜಾಧವ, ಗುರುರಾಜ ಶಿರಹಟ್ಟಿ, ಎಂ.ಚಿರಂಜೀವಿ, ಶಿವಕುಮಾರ ಓಲೇಕಾರ, ಮುಕ್ತೇಶ ಕೂರಗುಂದಮಠ, ಆನಂದ್ ಹುಲಬನ್ನಿ, ಕೆಎಸ್ ನಾಗರಾಜ, ಮುತ್ತಪ್ಪ ಕಂಬಳಿ, ಮಂಜುನಾಥ್ ಕೋಲ್ಕಾರ್, ಶೋಭಾ ಮುದೇನೂರ, ನಾಗಣ್ಣ ಸಣ್ಣಮನಿ, ಈರಣ್ಣ ಹಳ್ಳಳ್ಳೆಪ್ಪನವರ, ಸುರೇಂದ್ರ ಜ್ಯೋತಿ, ಬಸವರಾಜ ಸಾವಕ್ಕನವರ, ಪರಶುರಾಮ ಬಣಕಾರ, ರಮೇಶ್ ಘೋಣಗೇರಿ, ಮತ್ತಿತರರು ಭಾಗವಹಿಸಿದ್ದರು.
More Stories
ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ* *ಸವಣೂರ ತಾಪಂ ಪ್ರಭಾರ ಇಓ, ರಾಣೆಬೆನ್ನೂರ ಆರ್ ಐ ಮನೆ ಮೇಲೆ ದಾಳಿ..
ಸರಿಯಾದ ಮಾಹಿತಿ ನೀಡುವ ಮೂಲಕ ಸಮೀಕ್ಷೆ ಯಶಸ್ವಿ ಮಾಡಿ ಶಾಸಕ ಪ್ರಕಾಶ ಕೋಳಿವಾಡ
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ