ರಾಣೆಬೇನ್ನೂರು: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ ಸುಮಾರು ಆರು ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಾಣಿಜ್ಯ ತೆರಿಗೆ ಇಲಾಖೆ ತಂಡ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.
ನಗರದ ಎಂ. ಜಿ ರಸ್ತೆಯಲ್ಲಿ ಸುರೇಶಕುಮಾರ್ ದೇವಸಾಯಿಗರ ಸೇರಿದ ಅನಧಿಕೃತ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಶಿವಕುಮಾರ್ ನೇತೃತ್ವದ ತಂಡ ಹಾಗೂ ಎಂ. ಜಿ ನಾಯಕ್ ನೇತೃತ್ವದ ಸಂಚಾರ ಕಣ್ಗಾವಲು ತಂಡ ದಾಳಿ ನಡೆಸಿ ದಾಸ್ತಾನು ಮಾಡಿದ್ದ 5.5 ಲಕ್ಷ ಮೌಲ್ಯದ 528 ಕುಕ್ಕರಗಳು,316ಫ್ಯಾನ್ ಗಳು,126 ಮಿಕ್ಸಿ ಹಾಗೂ 8 ಗ್ಯಾಸ್ ಸ್ಟವ್ ಗಳನ್ನು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ.
ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.