ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!

ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ

ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರ ತಾಲೂಕ ಹಸಿರಿಕರಣಕ್ಕೆ “ಟ್ರೀ ಪಾರ್ಕ್” ಶಾಸಕ ಪ್ರಕಾಶ ಕೋಳಿವಾಡ

ನಗರಸಭೆ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಮೇಶ ಕರಡೆಣ್ಣನವರ ಆಯ್ಕೆ.

ಅಗಡಿ ತೋಟಕ್ಕೆ ಹೊರಟ್ಟವರು ಕೈಲಾಸಕ್ಕೆ ಹೋದರು, ಮೃತಪಟ್ಟವರ ವಿವರ ಇಲ್ಲಿದೆ.

ಮೋಟೆಬೆನ್ನೂರು ಬಳಿ ಭೀಕರ ಅಪಘಾತ, ರಾಣೆಬೇನ್ನೂರು ನಗರದ ಆರು ಜನ ಸಾವು.

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ: ಸಿ.ಎಂ ಭರವಸೆ

ರಾಹುತನಕಟ್ಟಿ ಗ್ರಾಪಂ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ.

ಸ್ಮಶಾನ ಜಾಗಕ್ಕಾಗಿ ತಾಲೂಕಿನ ಕೃಷ್ಣಾಪುರ ಗ್ರಾಮಸ್ಥರಿಂದ ಸಿಎಂಗೆ ಕಪ್ಪು ಪಟ್ಟಿ‌ ಪ್ರದರ್ಶನಕ್ಕೆ ಸಜ್ಜು.

ತಂದೆ ಶವ ಮನೆಯಲ್ಲಿಟ್ಟು ಕಣ್ಣೀರಿಡುತ್ತ ಪರೀಕ್ಷೆ ಬರೆದ ಅಣ್ಣ-ತಂಗಿಗೆ ಉತ್ತಮ ಅಂಕ; ತಂಗಿಗೆ ಶೇ. 83 ಅಣ್ಣನಿಗೆ ಶೇ. 85ರಷ್ಟು ಅಂಕ

ಶಿವಾನಂದ ಪಾಟೀಲ ರಾಜೀನಾಮೆ ಪತ್ರದಲ್ಲಿ ಏನು ಹೇಳಿದ್ದಾರೆ.

ಮೆಡ್ಲೇರಿ ರಸ್ತೆಯಿಂದ ಹುಣಸಿಕಟ್ಟಿ ತನಕ ಇಂದು ರಾತ್ರಿ ವಿದ್ಯುತ್ ಸರಬರಾಜು ಡೌಟು..

ಕಿತ್ತಾಟ, ಕಿರಚಾಟ ನಡುವೆ ನಗರಸಭೆ ಸ್ಥಾಯಿ ಸಮಿತಿಗೆ ಅನುಮೋದನೆ.

ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.

ರಷ್ಯಾದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ.

ಐಎಎಸ್‌ ಪಾಸ್ ಮಾಡಿದ ಸಚಿನ ಗುತ್ತೂರುಗೆ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

ಟ್ರ್ಯಾ ಕ್ಟರ್‌ನಿಂದ ಬಿದ್ದು ಅಣ್ಣಾ-ತಮ್ಮಾ ಸಾವು, ನಾಲ್ವರಿಗೆ ಗಂಭೀರ ಗಾಯ

ಶಾಸಕರೇ ಮಕ್ಕಳು ದಾರು ಚಟಕ್ಕೆ ಬಿದ್ದಾರೆ, ದಯಮಾಡಿ ಸಾರಾಯಿ ಬಂದ್ ಮಾಡ್ಸಿ

ರಾಣೆಬೇನ್ನೂರು: ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಅಬಕಾರಿ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

‘ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸ್‌ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ’ ಎಂಬ ಮಾತುಗಳು ಕೇಳಿ ಬರುತ್ತಿದೆ.

ರಾಣೆಬೇನ್ನೂರು ತಾಲೂಕಿನ ಚಳಗೇರಿ, ದೇವರಗುಡ್ಡ,  ಹಾಗೂ ರಾಹುತನಕಟ್ಟಿ ಗ್ರಾಮ ಸೇರಿದಂತೆ ಕೆಲ ದೊಡ್ಡ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಮಿತಿ ಮೀರಿದೆ. ಗ್ರಾಮದ ಮಕ್ಕಳು ಮದ್ಯದ ಚಟಕ್ಕೆ ಬಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ ಸಣ್ಣ ವಯಸ್ಸಿನಲ್ಲೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಈ ಗ್ರಾಮಗಳ ಮಹಿಳೆಯರು ಆರೋಪವಾಗಿದೆ.

 

ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕನಿಷ್ಠ 4 ರಿಂದ 5 ಅಕ್ರಮ ಮದ್ಯದ ಮಾರಾಟ ಅಂಗಡಿಗಳಿವೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಾರ್‌ಗಳಿಂದ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಮದ್ಯವು ಸ್ಥಳೀಯವಾಗಿ ಸಿಗುವುದರಿಂದ ಹೆಚ್ಚಿನ ಜನರು ಕುಡಿತಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

 

ಜಿಲ್ಲೆಗೆ ಲೋಕಾಯುಕ್ತರು ಬಂದ ಸಮಯದಲ್ಲಿ ರಾಣೆಬೇನ್ನೂರು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಪ್ರಾರಂಭ ಮಾಡಿದ್ದಾರೆ ಎಂದರೆ ಅವರ ಮೇಲೆ ಕ್ರಮ ಕೈಗೊಳ್ಳಲು ನಮ್ಮ ಅಧಿಕಾರಿಗಳಿಗೆ ತಿಳಿಸಲಾಗುವುದು.

__ ಶೈಲಜಾ ಟಿ.ವಿ.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!