ರಾಣೆಬೇನ್ನೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಹಾಗೂ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಾಡುತ್ತಿರುವ ಹೋರಾಟ ಹತ್ತು ದಿನಕ್ಕೆ ಕಾಲಿಟ್ಟರು ಸರ್ಕಾರ ಮಾತ್ರ ಯಾವುದೇ ಸ್ಪಂದಿಸಿಲ್ಲ ಎಂದು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ವಿರುದ್ಧ ಅಳಲು ತೋಡಿಕೊಂಡರು.
ನಗರದ ತಹಸೀಲ್ದಾರ ಕಚೇರಿಯ ಮುಂದೆ ಕಳೆದ ಹತ್ತು ದಿನಗಳಿಂದ ಸುಮಾರು ನಲವತ್ತಕ್ಕೂ ಹೆಚ್ಚು ಸಿಬ್ಬಂದಿ ಹೋರಾಟ ಮಾಡುತ್ತಿದ್ದರು ಈ ವರೆಗೂ ಯಾವುದೇ ಭರವಸೆ ಬಂದಿಲ್ಲ ಎಂದು ತಾಲೂಕು ಅಧ್ಯಕ್ಷ ಬಸಂತಕುಮಾರ ಕೆ. ಹೇಳಿದರು.
ರಾಜ್ಯ ಸರ್ಕಾರ ಇತ್ತಿಚೆಗೆ ಹಲವು ಹೊಸ ಆ್ಯಪ್ ಮೂಲಕ ಕೆಲಸ ಮಾಡುತ್ತಿದೆ ಇದರಿಂದ ನಮಗೂ ತೊಂದರೆ ಹಾಗೂ ಸಾರ್ವಜನಿಕರಿಗೆ ಸಹ ತೊಂದರೆಯಾಗಿದ್ದು ಇದನ್ನು ಬೀಡಬೇಕು. ಅಲ್ಲದೆ ಅಧಿಕಾರಿಗಳಿಗೆ ಹೊಸ ಕಚೇರಿ, ಮೊಬೈಲ್ ಸೇರಿದಂತೆ ಇತರೆ ಕೆಲಸಕ್ಕೆ ಬೇಕಾದ ಉಪಕರಣಗಳು ಸಹ ನೀಡಬೇಕು. ಜತೆಯಾಗಿ ಸ್ಥಳ ಪರಿಶೀಲನೆ ಸೇರಿದಂತೆ ಇತರೆ ಕಡೆ ಹೋದಾಗ ಕೇವಲ ಐದನೂರು ರೂ ಪ್ರಯಾಣ ಭತ್ಯೆ ನೀಡಲಾಗುತ್ತದೆ ಇದನ್ನು ಬದಲಾಯಿಸಿ ಪ್ರತಿ ತಿಂಗಳು ಐದು ಸಾವಿರ ನೀಡಬೇಕು ಎಂದು ಆಗ್ರಹ ಮಾಡಿದರು.
ಪ್ರತಿಭಟನೆ ಸಮಯದಲ್ಲಿ ಉಪಾಧ್ಯಕ್ಷ ಸಂಜೀವರೆಡ್ಡಿ ಭತ್ತೆರ, ಪ್ರಧಾನ ಕಾರ್ಯದರ್ಶಿ ಕೋಟ್ರೇಶ ಎ.ಎಮ್., ಖಜಾಂಚಿ ಬಸವರಾಜ ಎಡಿಕಾಲು, ಹಿರಿಯ ಗ್ರಾಮಧಿಕಾರಿ ಮಂಜುನಾಥ ಎಮ್.ಎನ್., ಗುರು ಲಮಾಣಿ, ಇಮಿಮ್ ಜಾಫರ್ ತಹಶೀಲ್ದಾರ, ಹನುಮಂತ ಯು, ಗಿರೀಶ ಪಾಟೀಲ, ದೀಪಾ ಎಮ್.ಎಸ್, ಪುಷ್ಪಾ ತೆಲಗಡೆ, ತರನಮ್ ಆರ್.ಜೆ, ವಿನೂತ ಪಿ.ಎಸ್, ವಿಶಾಲ ಚಕ್ರಸಾಲಿ, ಭಾವನಾ, ಕವಿತಾ ಎಚ್, ರೇಖಾ ಎಮ್.ಎಸ್, ಐಶ್ವರ್ಯ, ಚೇತನಾಕುಮಾರಿ, ಪ್ರಭಾಕರ ಎಮ್., ಪ್ರಕಾಶ ಲಮಾಣಿ, ಸುರೇಶ ಎಸ್.ಬಿ, ಕಿರಣ ಕುರುವತ್ತಿ, ಮಂಜುನಾಥ ಜಲ್ಲೇರ, ವೆಂಕಟೇಶ ಹಾಗೂ ಹನುಮಂತಪ್ಪ ಓಲೇಕಾರ ಸೇರಿದಂತೆ ಮತ್ತಿತರು ಇದ್ದರು.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”