ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!

ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ರಾಣೆಬೇನ್ನೂರು ನಕಲಿ ಬೀಜ ಮಾರಾಟ ಕೇಂದ್ರವಾಗಬಾರದು ಕೃಷಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ಎಚ್ಚರಿಕೆ.

ಗೃಹಲಕ್ಷ್ಮಿ ಹಣವನ್ನು ಶಾಲೆಗೆ ನೀಡಿದ ಆಶಾ ಕಾರ್ಯಕರ್ತೆ ಗಂಗಮ್ಮಗೆ ನಮಗೆ ಪ್ರೇರಣೆ ಶಾಸಕ ಪ್ರಕಾಶ ಕೋಳಿವಾಡ.

ರಾಣೆಬೇನ್ನೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಹಣವನ್ನು ಸರ್ಕಾರಿ ಶಾಲೆಗೆ ನೀಡಿದ ಆಶಾ ಕಾರ್ಯಕರ್ತೆ ಗಂಗಮ್ಮ ಅವರು ಈಡಿ ನಾಡಿಗೆ ಪ್ರೇರಣೆಯಾಗಿದ್ದಾರೆ ಎಂದು ಶಾಸಕರಾದ ಪ್ರಕಾಶ್ ಕೋಳಿವಾಡ ಹೇಳಿದರು.

ತಾಲೂಕಿನ ಐರಣಿ ಗ್ರಾಮದಲ್ಲಿ ಗಂಗಮ್ಮ ಲಗುಬಗಿ ಅವರಿಗೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಹಾಗೂ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರ ಸಮ್ಮುಖದಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭ‌ ಉದ್ದೇಶಿಸಿ ಮಾತನಾಡಿದರು.

ಗಂಗಮ್ಮ ಲಗುಬಗೆ ಅವರು ಅತ್ಯಂತ ಕಡುಬಡತನದ ಕುಟುಂಬದವರಾಗಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹1,50,000 ರೂ ಸಾಲ ಮಾಡಿ ಒಬ್ಬ ಮಗನನ್ನು ಎಂ.ಎ ಹಾಗೂ ಮತ್ತೊಬ್ಬ ಮಗನನ್ನು ಬಿ.ಎಸ್.ಸಿ ನರ್ಸಿಂಗ್ ಓದಿಸುತಿದ್ದು, ಇಂತಹ ಕಷ್ಟದ ಸಂದರ್ಭದಲ್ಲಿಯೂ ತನ್ನ ಗೃಹಲಕ್ಷ್ಮಿ ಕಂತಿನ ₹24,000 ರೂ ಗಳನ್ನು ತನ್ನೂರಿನ ಸರ್ಕಾರಿ ಶಾಲೆಗೆ ದೇಣಿಗೆ ನೀಡಿರುವುದು ಪದಗಳಲ್ಲಿ ವರ್ಣಿಸಲಾಗದ ಪ್ರಶಂನೀಯ ಕಾರ್ಯವಾಗಿದೆ. ಬಿ.ಎಸ್.ಸಿ ಓದುತ್ತಿರುವ ದಾನಿ ಗಂಗಮ್ಮ ಅವರ ಮಗನ ಶಿಕ್ಷಣ ಮುಗಿಯುತ್ತಿದ್ದಂತೆಯೇ ಅವರಿಗೆ ನೌಕರಿ ಕೊಡಿಸುವುದಾಗಿ ತಿಳಿಸಿದರು.

 

ಗಂಗಮ್ಮ ಅವರ ಈ ನಡೆಯಿಂದ ಪ್ರೇರಣೆ ಪಡೆದ ಶಾಸಕರು ಹಾಗೂ ಗ್ಯಾರಂಟಿ ಯೋಜನೆಯ ಸದಸ್ಯರು ಒಂದು ತಿಂಗಳ ವೇತನ ಶಿಕ್ಷಣ ಇಲಾಖೆಗೆ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ಇದೆ ಸಮಯದಲ್ಲಿ ಐರಣಿ ಗ್ರಾಮದ ಗಜಾನನ ಸಮಿತಿಯವರು ಸದರಿ ಶಾಲೆಗೆ ₹1,00,000 ರೂ ದೇಣಿಗೆ ನೀಡಿದರು, ಇದೇ ರೀತಿ ಗ್ರಾಮದ ಬುಳ್ಳಜ್ಜನವರು ಶಾಲೆಗೆ ವೈ ಫೈ ವ್ಯವಸ್ಥೆ ಮಾಡಿದ್ದು ಮತ್ತೊಬ್ಬ ಗ್ರಾಮದ ಶಿಕ್ಷಣ ಪ್ರೇಮಿ ಶಾಲೆಗೆ ಸೌಂಡ್ ಸಿಸ್ಟಮ್ ಸೇರಿದಂತೆ ಅನೇಕ ದಾನಿಗಳು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿದ್ದಾರೆ. ಐರಣಿ ಗ್ರಾಮದ ಪ್ರಬುದ್ಧ ಮನಸ್ಸುಗಳ ಈ ನಡೆ ರಾಣೆಬೆನ್ನೂರು ತಾಲ್ಲೂಕಿನ ಇತರರಿಗೂ ಮಾದರಿಯಾಗಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಹಕಾರ ನೀಡುವ ಮತ್ತಷ್ಟು ಮನಸ್ಸುಗಳು ರಾಣೇಬೆನ್ನೂರು ಮತಕ್ಷೇತ್ರದಲ್ಲಿ ಮುಂದೆ ಬರಲಿ ಎಂದು ಕರೆ ನೀಡಿದ ಶಾಸಕರು, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ನಮ್ಮ ಮಕ್ಕಳಿಗೆ ಬೆಳಕಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!