ರಾಣೆಬೇನ್ನೂರು: ನಾಡಿನಾದ್ಯಂತ ಕೆಲ ಸ್ವಾಮಿಗಳು ಮಠದ ಸ್ವಾಮಿಗಳು ಆದ ಮೇಲೆ ಪೂರ್ವಾಶ್ರಮ ಬಿಟ್ಟು ಧರ್ಮ ಸೇವೆ ಮಾಡಬೇಕು ಎಂದು ಸಾಣೆಹಳ್ಳಿ ತರಳಬಾಳು ಪೀಠದ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಣೆಬೇನ್ನೂರು ತಾಲೂಕಿನ ಐರಣಿ ಮಠದಲ್ಲಿ ಆಯೋಜಿಸಿದ ಮರಿ ಸ್ವಾಮಿ ಪಟ್ಟಾಭಿಷೇಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಾಡಿನಲ್ಲಿ ಮಠಗಳಿಗೆ ಹಾಗೂ ಸ್ವಾಮಿಗಳಿಗೆ ಕೊರತೆ ಇಲ್ಲ ಆದರೆ ಪೀಠದ ಮೇಲೆ ಕೂತ ನಂತರ ಅಣ್ಣನ ಮಗ, ತಮ್ಮನ ಮಗ, ಅಕ್ಕನ ಮಗ ಎಂಬ ರಕ್ತ ಸಂಬಂಧವನ್ನು ಬಿಟ್ಟು ಭಕ್ತ ಸಂಬಂಧ ಗಣವನ್ನು ಹೊಂದಬೇಕು ಎಂದು ನೆರದಿದ್ದ ಸ್ವಾಮೀಜಿಯವರಿಗೆ ಮಾರ್ಮಿಕವಾಗಿ ಹೆಳಿದರು.
ಸ್ವಾಮೀಜಿ ಆದ ಮೇಲೆ ಜಾತಿ, ಮತ, ಪಕ್ಷ, ರಾಜಕೀಯ ದೂರವಿಟ್ಟು ಜನರಿಗೆ ವೈಚಾರಿಕತೆ, ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಸಮಾಜದಲ್ಲಿ ಜಾತಿ ತಾರತಮ್ಯ ಹೆಚ್ಚಾಗಿದೆ ಅದನ್ನು ನಮ್ಮ ಕೈಯಿಂದ ದೂರ ಮಾಡಿಸುವ ಕೆಲಸ ಆಗಬೇಕು. ಇತ್ತಿಚೆಗೆ ರಾಜಕೀಯ ಎಂಬದು ಜಾತಿ ಧರ್ಮಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ಅದನ್ನು ನಾವುಗಳು ಖಂಡಿಸಬೇಕು ಎಂದು ಹೇಳಿದರು.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”