ರಾಣೆಬೇನ್ನೂರು: ಸ್ವಚ್ಛತೆ ಇಲ್ಲದೆ ಸಾರ್ವಜನಿಕರಿಗೆ ಅಶುದ್ಧವಾದ ಉಪಹಾರ ನೀಡುತ್ತಿದ್ದ ಹೋಟೆಲ್ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಪರಿಶೀಲನೆ ನಂತರ ಸೀಜ್ ಮಾಡಿದ್ದಾರೆ.
ಹೌದು ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೋಟೆಲ್ ಗುರುಪ್ರಸಾದ ಹೋಟೆಲನ್ನು ನಗರಸಭೆ ಪೌರಾಯುಕ್ತರಾದ ಎಫ್.ಐ.ಇಂಗಳಗಿ ಹಾಗೂ ಆಹಾರ ಇಲಾಖೆಯ ತಂಡದ ಅಧಿಕಾರಿಗಳು ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ.
ಹೊಟೆಲ್ ಒಳಗಡೆ ಯಾವುದೇ ಸ್ವಚ್ಚತೆ ಹಾಗೂ ಆಹಾರ ಗುಣಮಟ್ಟ ಸರಿಯಾಗಿ ಇಲ್ಲ ಎಂಬ ದೂರು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೌರಾಯುಕ್ತರು ಆಹಾರ ಇಲಾಖೆಯ ಅಧಿಕಾರಿಗಳ ಜತೆ ಜಂಟಿ ಕಾರ್ಯಾಚರಣೆ ಜತೆ ದಾಳಿ ಮಾಡಿದರು.
ಈ ಸಮಯದಲ್ಲಿ ಹೊಟೆಲ್ ಒಳಗಡೆ ಕೊಳಕು ಹಾಗೂ ಸ್ವಚ್ಛತೆ ಇಲ್ಲದೆ ಇರುವುದು ಕಂಡು ಬಂದಿದೆ. ಅಲ್ಲದೆ ಉಪಹಾರ ನಂತರ ಉಳಿದ ಮುಸುರಿ ಸಹ ಉಪಾಹಾರ ಪದಾರ್ಥಗಳ ಪಕ್ಕದಲ್ಲೇ ಇರುವುದು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಅಲ್ಲದೆ ಹೊಟೆಲ್ ಒಳಗಡೆ ಕೆಲಸ ಮಾಡುವು ಸಿಬ್ಬಂದಿ ಸಹ ಗುಟ್ಕಾ ಹಾಗೂ ಇತರೆ ಚಟಗಳನ್ನು ಮಾಡಿಕೊಂಡ ಕೆಲಸ ಮಾಡುವುದು ಕಂಡು ಬಂದಿದ್ದು ಅಧಿಕಾರಿಗಳು ಕೆಂಡಾಮಂಡಲವಾಗಿದ್ದಾರೆ. ಇದನ್ನು ನೋಡಿದ ಅಧಿಕಾರಿಗಳು ಎಲ್ಲಾ ಗ್ರಾಹಕರನ್ನು ಹೊರಗಡೆ ಕಳಿಸಿ ಹೊಟೆಲ್ ಸೀಜ್ ಮಾಡಿ ಬಾಗಿಲು ಹಾಕಿಸಿದ್ದಾರೆ.
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.