ರಾಣೆಬೇನ್ನೂರು: ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಪೋರ್ಸ್(Forum of Ranebennur civil engineer) ಹಾಗೂ ಮೆಗಾ ಎಕ್ಸೀಬಿಟರ್ಸ್ ಬೆಂಗಳೂರು ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ಬಿಲ್ಡ್ ಎಕ್ಸಪೋ ಪ್ರದರ್ಶನ ನಡೆಯಲಿದೆ ಎಂದು ಸಿವಿಲ್ ಇಂಜಿನೀಯರ ಸಂಘದ ಅಧ್ಯಕ್ಷ ವಿರೇಶ ಮಕರಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಗರದ ಜನರಿಗೆ ಅನುಕೂಲಕ್ಕೆ ಹಾಗೂ ಮನೆ ಕಟ್ಟಲು ಬೇಕಾಗುವ ಎಲ್ಲಾ ಸಾಂಪ್ರದಾಯಿಕ ಮತ್ತು ವಿನೂತನ ಸಾಮಾಗ್ರಿಗಳು, ಒಳಾಂಗಣ ಅಲಂಕಾರಕ್ಕೆ ಬೇಕಾಗುವ ವಸ್ತುಗಳು ಪೀಠೋಪಕರಣಗಳು, ಸುರಕ್ಷತಾ ಅಗತ್ಯತೆಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಲಭ್ಯವಿರುವ ಸಾಲ ಸೌಲಭ್ಯಗಳು ಒಂದೇ ಸೂರಿನಡಿ ನಗರದ ಜನರಿಗೆ ದೊರೆಯಬೇಕು ಎಂಬ ಉದ್ದೇಶದಿಂದ ದೇಶದ ಹತ್ತಾರು ಕಂಪನಿಗಳು ಕರೆಸಿ ಜನರಿಗೆ ಪ್ರದರ್ಶನ ಮೇಳ ಆಯೋಜನೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿ
ಈ ಪ್ರದರ್ಶನ ಮೂರು ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಡೆಯಲಿದ್ದು, ಪ್ರತಿ ಎರಡು ಗಂಟೆಗೊಮ್ಮೆ ಬರುವ ಗ್ರಾಹಕರಿಗೆ ವಿಶೇಷ ಬಹುಮಾನ ಇಡಲಾಗಿದೆ ಎಂದರು.
ಪ್ರದರ್ಶನ ಮೇಳವನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ, ಯೋಜನಪ್ರಾಧಿಕಾರದ ಬಿ.ಆರ್.ರವಿಕಿರಣ್ ಭಾಗವಹಿಸುವರು.
ಸುದ್ದಿಗೋಷ್ಠಿ ಸಮಯದಲ್ಲಿ ಇಂಜಿನಿಯರ್ ಅಶೋಕ ಯೋಗಿ, ಆನಂದ ಮೆಹಂಡ್ ಸೇರಿದಂತೆ ಇತರರು ಹಾಜರಿದ್ದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ