ರಾಣೆಬೇನ್ನೂರು: ಇತ್ತಿಚೆಗೆ ನಡೆದ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಲೂಕಿನ ಮೂವರು ಉತ್ತಮ ಅಂಕಗಳನ್ನು ಪಡೆದು ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಲಕ್ಷ್ಮಾಪುರ ಎಂಬ ಕುಗ್ರಾಮದ ಸುಭಾನಸಾಬ್ ಓಲೇಕಾರ, ಬಿಲ್ಲಹಳ್ಳಿ ಗ್ರಾಮದ ಕಾಂತರಾಜ ಅಂಗಡಿ ಹಾಗೂ ಮೃತ್ಯುಂಜಯ ನಗರದ ಗುರುಪ್ರಸಾದ ನಾಯಕ ಎಂಬ ಮೂವರು ಆಯ್ಕೆಯಾಗಿದ್ದಾರೆ.

ಮೂರು ವರ್ಷಗಳ ಹಿಂದೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಂದಿನ ಆಯ್ಕೆ ಪಟ್ಟಿಯನ್ನು ರಾಜ್ಯ ಸರ್ಕಾರ ರದ್ದು ಮಾಡಲಾಯಿತು. ನಂತರ ಸರ್ಕಾರ ಅಕ್ರಮವನ್ನು ತಡೆಯಲು ಪಿಎಸ್ಐ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿಗೆ ನೀಡಿತು. ನಂತರ ನಡೆದ ಪರೀಕ್ಷೆಯಲ್ಲಿ ತಾಲೂಕಿನ ಮೂವರು ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಸರು ತಂದಿದ್ದಾರೆ.

ಸುಭಾನಸಾಬ್ ಓಲೇಕಾರ ರಾಣೆಬೇನ್ನೂರು ನಗರದ ಸಂಚಾರ ಪೋಲಿಸ ಠಾಣೆಯಲ್ಲಿ ಪೋಲಿಸ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತ ಇದೀಗ ಪಿಎಸ್ಐ ಆಗಿ ಆಯ್ಕೆಯಾಗಿರುವುದು ವಿಶೇಷ. ಅಲ್ಲದೆ ಗುರುಪ್ರಸಾದ ನಾಯಕ ಕಳೆದ ಬಾರಿ ನಡೆದ ಪರೀಕ್ಷೆಯಲ್ಲಿ ಸಾಮನ್ಯ ವರ್ಗದಲ್ಲಿ ಆಯ್ಕೆಯಾಗಿದ್ದರು ಆದರೆ ಪಟ್ಟಿ ರದ್ದು ಮಾಡಿದ ನಿರಾಸೆ ಆಗದೆ ಈ ಬಾರಿ ಮತ್ತೆ ಎಸ್ಸಿ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿದ್ದಾರೆ.


More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.