ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ

ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!

ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ಹಬ್ಬ ಹರಿದಿನಗಳು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಕಾಗಿನಲೆ ಶ್ರೀಗಳು ಕಿವಿಮಾತು..

oplus_0

ರಾಣೆಬೇನ್ನೂರು: ಸಮಾಜದ ಬಂಧುಗಳು ಬೀರಪ್ಪ, ದ್ಯಾಮವ್ವ ಸೇರಿದಂತೆ ಇತರೆ ಜಾತ್ರೆ, ಹಬ್ಬ ಹರಿದಿನಗಳನ್ನು ಬಿಟ್ಟು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಎಂದು ಕುರುಬ ಸಮುದಾಯದ ಪಾಲಕರಿಗೆ ಕಾಗಿನಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.

ರಾಣೆಬೇನ್ನೂರು ನಗರದ ಹೊರಗುಡಿ ಬಿರೇಶ್ವರ‌ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬ ನೌಕರರ ಸಂಘ ಆಯೋಜನೆ ಮಾಡಿದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕುರುಬ ಸಮುದಾಯ ಮಕ್ಕಳು ಉತ್ತಮ ಸ್ಥಾನದಲ್ಲಿ ಉತ್ತಮ ನೌಕರಿಯಲ್ಲಿ ಇರಬೇಕು ಎಂದರೆ ಮೊದಲು ಸಮುದಾಯಕ್ಕೆ ಶಿಕ್ಷಣ ಅವಶ್ಯಕತೆ ಇದೆ. ಅದನ್ನು ನಾವುಗಳು ನಮ್ಮ ಪೀಳಿಗೆಗೆ ದಾರಿ ಮಾಡಿಕೊಡಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಜತೆಯಾಗಿ ಎಲ್ಲಾ ಸಮುದಾಯ ಜತೆ ಹೊಂದಿಕೊಂಡು ಹೋಗಬೇಕು ಎಂದು ಸಮಾಜದ ಬಂಧುಗಳಿಗೆ ಮಾಡಿದರು.

ಶಾಸಕ ಪ್ರಕಾ‌ಶ ಕೋಳಿವಾಡ ಮಾತನಾಡಿ, ಸರ್ಕಾರ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವ ಕಾರ್ಯ ಮಾಡುವುದು ಸರ್ಕಾರಿ ನೌಕರರು, ವಿದ್ಯಾರ್ಥಿಗಳಿಗೆ ಪೋತ್ಸಾಹ ಧನ ನೀಡಿ ಅವರನ್ನು ಪೋತ್ಸಾಹ ನಿಡುತ್ತಿರುವುದು ಶಾಘ್ಲನೀಯ, ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ ಯಾಗಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಆಗಬೇಕಾದರೆ ಕಂಪ್ಯೂಟರ್ ಜ್ಞಾನದ ಜತೆಯಾಗಿ ಇತರೆ  ಕೌಶಲ್ಯ ಕಲೆಗಳನ್ನು ಬೆಳೆಸಿಕೊಳ್ಳಬೇಕು, ಆಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಾ.ಗಂಗಾಧರ ಕೊಡ್ಲಿಯವರು ಮಕ್ಕಳಿಗೆ ಇಂದಿನ ಸ್ಪರ್ಧಾತ್ಮಕ ವಿಷಯದ ಕುರಿತು ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಇತರೆ ಪದವಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಸುಭಾಸಚಂದ್ರ ಕುರುಬರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು

ಕಾರ್ಯಕ್ರಮದಲ್ಲಿ ದಾವಣಗೆರೆ ವಿನಯಕುಮಾರ ಜೆ.ಬಿ. ಡಾ‌.ಪ್ರವೀಣಕುಮಾರ ಖನ್ನೂರ, ಅಬಕಾರಿ ನಿರೀಕ್ಷಕ ಹನುಮಂತ ಪಠಾತ್, ತಾಲೂಕ ಕುರುಬರ ಸಂಘದ ಅಧ್ಯಕ್ಷ ಷಣ್ಮುಖ ಕಂಬಳಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ ಬಿ.ಎಸ್. ಕೃಷಿ ವಿಜ್ಞಾನಿ ರಾಜು ನೆಳ್ಳೂರು, ಚೋಳಪ್ಪ ಕಸವಾಳ, ಹೆಸ್ಕಾಂ ಎಇಇ ಲಕ್ಷಣಪ್ಪ ಕೆ., ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್.ಜಿ.ಮೇಟಿ, ಕೆಪಿಸಿಸಿ ಜಿಲ್ಲಾಧ್ಯಕ್ಷ ಸಂಜೀವ, ಉಪ ತಹಶಿಲ್ದಾರರ ಕುವಲಶ್ಯಾಮ ಗೊರವರ ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!