ರಾಣೆಬೇನ್ನೂರು: ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಸೂರಜ್ ಲಾಡ್ಜನಲ್ಲಿ ವ್ಯಕ್ತಿಯೊರ್ವ ಬಾತರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಕಾಕೋಳ ಗ್ರಾಮದ ಮೈಲಾರಪ್ಪ ರುದ್ರಪ್ಪ ಸರಬಣ್ಣನವರ(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಈತನು ನಿನ್ನೆಯ ದಿವಸ ಮಹಿಳೆಯೊಂದಿಗೆ ಆಗಮಿಸಿ ಲಾಡ್ಜನಲ್ಲಿ ರೂಂ ಪಡೆದಿದ್ದ ಎನ್ನಲಾಗಿದೆ. ಆದರೆ ಏಕಾಏಕಿ ಮಹಿಳೆಯ ಸೀರೆ ತೆಗೆದುಕೊಂಡು ಹೋಗಿ ಬಾತರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ.
ನಂತರ ಮಹಿಳೆ ಎಷ್ಟೇ ಬಾಗಿಲು ಬಡಿದರು ಬಾಗಿಲು ತಗೆಯದ ಕಾರಣ ಅನುಮಾನ ಬಂದಿದೆ ಕೂಡಲೇ ಲಾಡ್ಜ್ ಸಿಬ್ಬಂದಿ ಹಾಗೂ ಪೋಲಿಸರ ಕರೆಸಿ ಬಾಗಿಲು ತಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದರೆ ಲಾಡ್ಜಿಗೆ ಬಂದ ವ್ಯಕ್ತಿ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮಾತ್ರ ನಿಗೂಢವಾಗಿದ್ದು, ಶಹರ ಪೋಲಿಸರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.