ಹಾವೇರಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನ ಮೂಲದ ಬಿಕಾರಾಮ್‌ನನ್ನು ಹಾವೇರಿ ನಗರದಲ್ಲಿ ಬಂಧಿಸಲಾಗಿದೆ.
ರಾಜಸ್ತಾನ ಮೂಲದ ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗೆ ಹಾವೇರಿ ನಗರಕ್ಕೆ ಬಂದಿದ್ದು, ನಗರದ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿ ಗ್ರಿಲ್ ಕೆಲಸ ಮಾಡಿಕೊಂಡಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು, ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಮೊದಲು ಬೇರೆಡೆ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಕೂಲಿಗಾಗಿ ಹಾವೇರಿಗೆ ಬಂದಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದು ಅವರಿಗೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.