ರಾಣೆಬೇನ್ನೂರು: ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಬಾಲಾಜಿ ಇವೆಂಟ್ ಹಾಸನ ವತಿಯಿಂದ ಐದು ದಿನಗಳ ಕಾಲ ಹಲಸು-ಮಾವು ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಇವೆಂಟ್ ಮ್ಯಾನೇಜರ್ ನವೀನಕುಮಾರ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು ರಾಣೆಬೇನ್ನೂರು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಈ ಒಂದು ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ಹಲಸಿಗೆ ಸಂಬಂಧಿಸಿದ ಖಾದ್ಯಗಳು ಹಾಗೂ ಹಲಸಿನ ಪ್ರದರ್ಶನ ನಡೆಯಲಿದೆ. ಜತೆಯಾಗಿ ಮನೆಗೆ ಬೇಕಾದ ಕರಕುಶಲ ವಸ್ತುಗಳನ್ನು ಸಹ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು. ಒಟ್ಟು ಅರವತ್ತು ಸ್ಟಾಲಗಳನ್ನು ತೆಗೆಯಲಾಗಿದ್ದು ವಿವಿಧ ವಸ್ತುಗಳ ಮಾರಾಟ ಸಹ ನಡೆಯುತ್ತದೆ. ನಗರದ
ಜನರಿಗೆ ಉಚಿತ ಪ್ರವೇಶವನ್ನು ನೀಡಲಾಗಿದ್ದು, ಬೆಳಿಗ್ಗೆ ಒಂಬತ್ತು ಗಂಟೆಯಿಂದ ಪ್ರಾರಂಭವಾಗಿ ರಾತ್ರಿ ಒಂಬತ್ತು ಗಂಟೆಯವರೆಗೆ ಪ್ರದರ್ಶನ ಇರುತ್ತದೆ ಎಂದು ತಿಳಿಸಿದರು.
More Stories
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!
ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.
ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…