ರಾಣೆಬೇನ್ನೂರು: ನಾನು ಆ ಪಕ್ಷ, ಈ ಜಾತಿ, ಆ ಧರ್ಮ ಎಂದು ರಾಜಕೀಯ ಮಾಡದೆ ಎಲ್ಲಾ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿಕಲಾಂಗರಿಗೆ ತ್ರಿಚಕ್ರ ವಾಹನಗಳು ವಿತರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರಸಭೆ ಆವರಣದಲ್ಲಿ ಶನಿವಾರ ಏರ್ಪಡಿಸಿದ ಎಸ್,ಎಫ್,ಸಿ ಅನುದಾನದಲ್ಲಿ 2023-24 ನೇ ಸಾಲಿನ ಶೇ. 5 ರ ಎಸ್ ಎಪ್ ಸಿ ಮತ್ತು ನಗರಸಭೆಯ ಅನುದಾನದಡಿ ವಿಶೇಷಚೇತನ 17 ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನಗಳು ವಿತರಣೆ ಮಾಡಿ ಮಾತನಾಡಿದರು
ಸರ್ಕಾರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಜತೆಯಾಗಿ ಸ್ಥಳೀಯ ಸಂಸ್ಥೆಗಳು ಸಹ ವಿದ್ಯಾರ್ಥಿಗಳು ಪ್ರೋತ್ಸಾಹ ನೀಡುವ ಸಲುವಾಗಿ ಅವರು ಸಹ ಲ್ಯಾಪ್‌ಟಾಪ್ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತದೆ
ಇಂಜನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸುಮಾರು 22 ವಿದ್ಯಾರ್ಥಿಗಳಿಗೆ 3.86 ಲಕ್ಷ ವೆಚ್ಚದಲ್ಲಿ ಲ್ಯಾಪ್‌ಟಾಪ್ ಜತೆಯಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಎಫ್.ಐ.ಇಂಗಳಗಿ, ನಗರಸಭೆ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಕರಡೆಣ್ಣನವರ, ನಗರಸಭೆ ಸದ್ಯಸರಾದ ಪ್ರಕಾಶ್ ಪೂಜಾರ, ಶೇಖಪ್ಪ ಹೊಸಗೌಡ್ರ, ಮಲ್ಲಿಕಾರ್ಜುನ ಅಂಗಡಿ, ಶಶಿಧರ ಬಸೇನಾಯಕ, ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರು ನಗರ ಪ್ರಾಧಿಕಾರ ಅಧ್ಯಕ್ಷ ವಿರೇಶ್ ಮೊಟಗಿ ಸೇರಿದಂತೆ ಅಧಿಕಾರಿಗಳ ಹಾಜರಿದ್ದರು..
More Stories
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು ಮೇಳ.
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!