ರಾಣೆಬೆನ್ನೂರ: ನಗರದ ಕೆಲ ರಸಗೊಬ್ಬರ ಅಂಗಡಿಗಳಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸೋಮವಾರ ಎರಡು ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿರುವ ಕೃಷಿ ಅಧಿಕಾರಿಗಳು ಬರೋಬ್ಬರಿ 76 ಕ್ವಿಂಟಲ್ ನಕಲಿ ಗೊಬ್ಬರ ವಶಪಡಿಸಿಕೊಂಡಿದ್ದಾರೆ.
ನಗರದ ಮೇಡ್ಲೇರಿ ರಸ್ತೆಯ ಸ್ವಸ್ತಿಕ್ ಅಗ್ರೋ ಸೆಂಟರ್ 35 ಕ್ವಿಂಟಲ್ 70 ಚೀಲ ಹಾಗೂ ಬನಶಂಕರಿ ಅಗ್ರೋ ಟ್ರೆಡರ್ಸ್ ಅಂಗಡಿಯ 41 ಕ್ವಿಂಟಲ್ 83 ಚೀಲ ನಕಲಿ ಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಇದರ ಮಾಲೀಕರಾದ ವಿರುಪಾಕ್ಷಪ್ಪ ಎನ್. ಐರಣಿಶೆಟ್ರ ಹಾಗೂ ನಂದೀಶ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ತಮ್ಮ ಅಂಗಡಿಗಳಲ್ಲಿ ಎನ್ಪಿಕೆ 17-17-17 ಎಂಬ ಹೆಸರಿನಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದರು. ಗೊಬ್ಬರ ಖರೀದಿಸಿದ ರೈತರು ಜಮೀನಿಗೆ ಹಾಕಿದಾಗ, ಮಳೆ ಬಂದರೂ ಗೊಬ್ಬರ ಕರಗಿಲ್ಲ. ಇದರಿಂದ ಅನುಮಾನಗೊಂಡ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಕಳೆದ ವಾರ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಗೊಬ್ಬರ ಮಾರಾಟ ಮಾಡಿದ್ದ ಎರಡು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಗೊಬ್ಬರದ ಮಾದರಿ ಪಡೆದು ಪರೀೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅದರ ವರದಿ ಸೋಮವಾರ ಬಂದಿದ್ದು ನಕಲಿ ಗೊಬ್ಬರ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳ ತಂಡ ರಸಗೊಬ್ಬರದ ಅಂಗಡಿಗಳಿಗೆ ಭೇಟಿ ಗೊಬ್ಬರ ಜಪ್ತಿ ಮಾಡಿದ್ದಾರೆ.
ಕೃಷಿ ಅಧಿಕಾರಿಗಳಾದ ಶಿವಾನಂದ ಹಾವೇರಿ, ಅರವಿಂದ ಎಂ., ವೀರೇಶ ಜೆ.ಎಂ. ಹಾಗೂ ಸಿಬ್ಬಂದಿ ಇದ್ದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ