ರಾಣೆಬೇನ್ನೂರು: ತಾಲೂಕಿನ ಯಕಲಾಸಪುರ ಗ್ರಾಮದ ಬಳಿ ಕಳೆದು ಒಂದು ತಿಂಗಳಿಂದ ಚಿರತೆಗಳು ಹೆಚ್ಚಾಗಿ ಕಂಡು ಬಂದಿದ್ದು, ಸದ್ಯ ಗ್ರಾಮ ಚಿರತೆಗಳ ತಾಣವಾಗಿ ಮಾರ್ಪಟ್ಟಿದೆ.
ಹೌದು ಅರಣ್ಯ ಅಂಚಿನಲ್ಲಿರುವ ಯಕಲಾಸಪುರ ಗ್ರಾಮದ ಬಳಿ ನಿತ್ಯವೂ ಜನರಿಗೆ ಹಾಗೂ ರೈತರಿಗೆ ಚಿರತೆ ಕಾಣಿಸಿತೋಡಗಿವೆ. ಅಲ್ಲದೆ ಮರಿ ಚಿರತೆಗಳ ಹಾಗೂ ಹೆಣ್ಣು ಚಿರತೆಗಳು ಹೆಚ್ಚಾಗಿ ಕಂಡು ಬಂದಿದ್ದು ಜನರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ.
ಶುಕ್ರವಾರ ದಿನ ಗ್ರಾಮದ ಅಂಚಿನಲ್ಲಿರುವ ಹೊಲದ ರಸ್ತೆಯಲ್ಲಿ ಹೆಣ್ಣು ಚಿರತೆಯೊಂದು ರಾಜಾರೋಷವಾಗಿ ಓಡಾಡುವ ದೃಶ್ಯವನ್ನು ರೈತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆ ಚಿರತೆ ಸದ್ಯ ಹೆಣ್ಣು ಚಿರತೆಯೆಂದು ಅರಣ್ಯ ಇಲಾಖೆಯ ಗುರುತಿಸಿದ್ದು, ಅರಣ್ಯದೊಳಗೆ ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರಬಹದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ