ರಾಣೆಬೇನ್ನೂರು: ನಗರದ ಪ್ರಖ್ಯಾತ ವೈದ್ಯರಾದ ಡಾ.ನಾಗರಾಜ ಎಸ್.ಕೆ ಅವರಿಗೆ ಏ.23 ರಂದು ರಷ್ಯಾದ ಮಾಸ್ಕೋದಲ್ಲಿ”ಗ್ಲೋಬಲ್ ಅಚಿವರ್ಸ್” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವವಾಣಿ ಪತ್ರಿಕೆ ಹಾಗೂ ಡೆಪ್ಯೂಟಿ ಆಫ್ ದಿ ಸ್ಟೇಟ್ ಸಹಭಾಗಿತ್ವದಲ್ಲಿ ರಷ್ಯಾದ ಮಾಸ್ಕೋದಲ್ಲಿ ಆಯೋಜನೆ ಮಾಡಿದ ‘ಗ್ಲೋಬಲ್ ಅಚಿವರ್ಸ್’ ಪ್ರಶಸ್ತಿಗೆ ಡಾ.ನಾಗರಾಜ ಎಸ್.ಕೆ ಅವರು ಆಯ್ಕೆಯಾಗಿದ್ದರು.
ಡಾ.ನಾಗರಾಜ ಎಸ್.ಕೆ ಅವರು ರಾಣೆಬೇನ್ನೂರು ನಗರದಲ್ಲಿ ವೈದ್ಯಕೀಯ ಸೇವೆ ಜತೆಯಾಗಿ ಸಾಮಾಜಿಕ ಸೇವೆ, ಕನ್ನಡ ನಾಡುನುಡಿಯ ಬಗ್ಗೆ ಅಪಾರ ಕಾಳಜಿ ಹಾಗೂ ಸರ್ಕಾರ ವೈದ್ಯಕೀಯ ಸೇವೆಯಲ್ಲಿ ಅಪಾರವಾದ ಸೇವೆ ಮಾಡಿದ ಹಿನ್ನೆಲೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಈ ಹಿನ್ನಲೆ ಏ.23 ರಂದು ಅವರಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಟಿಗ ಪೀಠದ ಶ್ರೀ ಶಾಂತವೀರ ಸ್ವಾಮೀಜಿ ಹಾಗೂ ರಷ್ಯಾದ ಡೆಪ್ಯೂಟಿ ಆಫ್ ದಿ ಸ್ಟೇಟ್ ದೂಮದ ಗ್ಲಾಸ್ಕೋವಾ ಅಂಜಲಿಕಾ ಇಗೋರ್ವಾ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
More Stories
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”
ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ ಪ್ರಕಾಶ ಕೋಳಿವಾಡ,