ರಾಣೆಬೇನ್ನೂರು: ಕೃಷಿ ಇಲಾಖೆಯ ವತಿಯಿಂದ ಸುಮಾರು ಒಂದು ಕೋಟಿ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ಶಾಸಕರಾದ ಪ್ರಕಾಶ ಕೋಳಿವಾಡರು ರೈತರಿಗೆ ವಿತರಣೆ ಮಾಡಿದರು.
ನಗರದ ಕೃಷಿ ಇಲಾಖೆಯ ಆವರಣದಲ್ಲಿ ತಾಲೂಕಿನ ಸುಮಾರು ಮೂವತ್ತು ಗ್ರಾಮದ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು ತಾಲೂಕಿನ ರೈತರಿಗೆ ಅನುಕೂಲಕ್ಕಾಗಿ ಈ ಕೃಷಿ ಯಂತ್ರೋಪಕರಣಗಳನ್ನು ಹೆಚ್ಚಾಗಿ ತಂದು ನೀಡಲಾಗಿದೆ. ಆದರೆ ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಯಶಸ್ವಿ ಕಾಣಬೇಕು ಎಂದು ತಿಳಿಸಿದರು.
ಅಲ್ಲದೇ ಸರ್ಕಾರದ ಯೋಜನೆ ಪಡೆದುಕೊಂಡ ಕೆಲವರು ಬೇರೆಯವರಿಗೆ ಮಾರಾಟ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ದಯವಿಟ್ಟು ಆ ಕೆಲಸ ಯಾರು ಮಾಡಬಾರದು ಎಂದು ರೈತರಿಗೆ ಹೇಳಿದರು.
ಈ ಸಮಯದಲ್ಲಿ ಕೃಷಿ ಅಧಿಕಾರಿ ಶಾಂತಮಣಿ, ಅರವಿಂದ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
More Stories
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”
ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ ಪ್ರಕಾಶ ಕೋಳಿವಾಡ,