ರಾಣೆಬೇನ್ನೂರ: ದೇಶದ ಅತ್ಯುನ್ನತ ನಾಗರಿಕ ಆಡಳಿತ ಸೇವೆ( IAS) ಪರೀಕ್ಷೆಯಲ್ಲಿ ತಾಲೂಕಿನ ಯುವಕನೊರ್ವ 41 ನೇ ರ್ಯಾಂಕ್ ಪಡೆಯುವ ಮೂಲಕ ದೇಶಕ್ಕೆ ಹಾಗೂ ತಾಲೂಕಿಗೆ ಮಾದರಿಯಾಗಿದ್ದಾನೆ.
ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಯುವಕ ಡಾ.ಸಚಿನ್ ಗುತ್ತೂರು ಅವರು ನಾಗರೀಕ ಸೇವಾ ಪರೀಕ್ಷೆ ಪಾಸ್ ಮಾಡುವ ಮೂಲಕ ರಾಣೆಬೇನ್ನೂರು ತಾಲೂಕಿಗೆ ಹೆಸರು ತಂದಿದ್ದಾರೆ.
ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರಿಹರದಲ್ಲಿ ಮುಗಿಸಿ ನಂತರ ವಿಜ್ಞಾನ ವಿಷಯವನ್ನು ಎಂಕೆಟಿ ಕಾಲೇಜಿನಲ್ಲಿ ಪೂರೈಸಿದರು.
ತದ ನಂತರ ವೈದ್ಯಕೀಯ ಸೀಟ್ ಪಡೆದು ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿ ಆರಂಭಿಸಿದರು. ಜತೆಯಾಗಿ ನಾಗರೀಕ ಸೇವಾ ಪರೀಕ್ಷೆ ಪಾಸ್ ಮಾಡಬೇಕು ಎಂಬ ಹಂಬಲದಿಂದ ಸತತ ಓದುವು ಮೂಲಕ ಇದೀಗ ಐಎಎಸ್ ಪಾಸ್ ಮಾಡಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ