ರಾಣೆಬೇನ್ನೂರು:ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದ ತಾಲೂಕಿನ ತುಂಗಭದ್ರಾ ಹಾಗೂ ಕುಮದ್ವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ.
ತಾಲೂಕಿನ ಮುಷ್ಟೂರು ಹಾಗೂ ಲಿಂಗದಳ್ಳಿ ಗ್ರಾಮ ಸಂಪರ್ಕಿಸುವ ಕುಮದ್ವತಿ ನದಿಯ ಪ್ರವಾಹದಿಂಸ ಸಂಪೂರ್ಣ ಮುಳುಗಡೆಯಾಗಿದ್ದು ಸಂಚಾರ ಬಂದಾಗಿದೆ.
ಲಿಂಗದಳ್ಳಿ ಗ್ರಾಮದ ಜನರಿಗೆ ಸಂಚಾರಕ್ಕೆ ಅಡೆತಡೆಯಾಗಿದ್ದು ಇದೀಗ ಸುತ್ತುವರೆದ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಬೆಳೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಅಲ್ಲದೆ ಪ್ರವಾಹ ಹೆಚ್ಚಾದರೆ ತಾಲೂಕು ಆಡಳಿತ ಎದುರಿಸಲು ಸಜ್ಜಾಗುವಂತೆ ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದ್ದಾರೆ.
ಭೇಟಿ ಸಮಯದಲ್ಲಿ ತಹಸೀಲ್ದಾರ ಗುರುಪ್ರಸಾದ ಸೇರಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ಪ್ರಮುಖರು ಹಾಜರಿದ್ದರು
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.