ರಾಣೆಬೇನ್ನೂರು: ನಗರದ ಪರಿವೀಕ್ಷಣೆ ಮಂದಿರದ ಸರ್ಕಿಟ್ ಹೌಸ್ ನಂ-02 ರ ದುರಸ್ತಿ ಹಿನ್ನೆಲೆ ಮುಂಭಾಗದ ಗೋಡೆಗೆ ಹಾಕಿರುವ ಗ್ರಾನೈಟ್ ಕಿತ್ತುಕೊಂಡು ಹೋದ ಗುತ್ತಿಗೆದಾರ.
ಹೌದು ಸರ್ಕಿಟ್ ಹೌಸ್ -2 ರಲ್ಲಿ ಎರಡನೇ ಅಂತಸ್ತಿನ ದುರಸ್ತಿ ಕಾರ್ಯಕ್ಕೆ ಟೆಂಡರ್ ಕರೆಯಲಾಗಿತ್ತು. ಅದರಂತೆ ಹಾವೇರಿ ಗುತ್ತಿಗೆದಾರರು ಇದರ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಳ ಅಂತಸ್ತಿನ ಮುಂಭಾಗದ ಗೋಡೆಯ ಕೆಲ ಗ್ರಾನೈಟ್ ಕಲ್ಲುಗಳು ಹೊಡೆದಿದ್ದವು.
ಈ ಹಿನ್ನೆಲೆ PWD ಅಧಿಕಾರಿಗಳ ಸೂಚನೆ ಮೇರೆಗೆ ತೆರವು ಮಾಡಲಾಗಿತ್ತು ಆದರೆ ಸುಮಾರು ಒಂದು ಲಕ್ಷ ರೂಗಳ ಬೆಲೆಬಾಳುವ ಕಿತ್ತ ಗ್ರಾನೈಟ್ ಕಲ್ಲುಗಳನ್ನು ಗುತ್ತಿಗೆದಾರ ಎತ್ತಿಕೊಂಡು ಹೋಗುತ್ತಿರುವದನ್ನು ಸಾರ್ವಜನಿಕರ ನೋಡಿದ್ದಾರೆ. ಅಲ್ಲದೆ ಸಾರ್ವಜನಿಕರ ವಿಡಿಯೋ, ಪೋಟೋ ಮಾಡಿ ಕೇಳಿದರೆ ನಮ್ಮ ಕಲ್ಲುಗಳು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಗುತ್ತಿಗೆದಾರ ಸಬೂಬು ಉತ್ತರ ನೀಡಿದ್ದಾರೆ.
ಇದರ ಬಗ್ಗೆ ಪಿಡ್ಬ್ಲೂಡಿ ಎಇಇ ಮರಿಸ್ವಾಮಿ ಹಾಗೂ ಇಇ ರಮೇಶ ನಾಯಕ ಅವರಿಗೆ ಇದರ ಬಗ್ಗೆ ಮಾಹಿತಿ ಕೇಳಲು ಕರೆ ಮಾಡಿದರೆ ಕರೆ ಸ್ವೀಕಾರ ಮಾಡಲಿಲ್ಲ. ಸರ್ಕಾರದ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳ ಗಪ್ ಚುಪ್ ಇರುವುದು ನೋಡಿದರೆ ಹಲವು ಅನುಮಾನಕ್ಕೆ ಕಾರಣವಾಗಿದೆ.
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.