ರಾಣೆಬೇನ್ನೂರು: ತಿಥಿ ಕಾರ್ಯವನ್ನು ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ಬರುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಸುಮಾರು ಇಪ್ಪತ್ತು ಜನರು ಗಾಯಗೊಂಡ ಘಟನೆ ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ಬಳಿ ಸಂಜೆ ನಡೆದಿದೆ.
ನದಿಹರಳಹಳ್ಳಿ ಗ್ರಾಮದ ಬೀರಪ್ಪ ಕುರುಬರ ಎಂಬ ಕುಟುಂಬದವರು ತಮ್ಮ ಸಂಬಂಧಿಕರ ಇತ್ತಿಚೆಗೆ ಮೃತಪಟ್ಟಿದ್ದರು. ಅವರ ತಿಥಿ ಕಾರ್ಯಕ್ಕೆ ಸಂಬಂಧಿಕರನ್ನುಟ್ರಾಕ್ಟರ್ ಮಾಡಿಕೊಂಡ ಹರಿಹರ ತಾಲೂಕಿಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಗ್ರಾಮಕ್ಕೆ ವಾಪಸು ಬರುವಾಗ ವಡೇರಾಯನಹಳ್ಳಿ ಗ್ರಾಮದ ಬಳಿ ರಸ್ತೆ ಕಿರಿದಾಗಿದ್ದ ಹಿನ್ನೆಲೆ ಪಲ್ಟಿಯಾಗಿ ಬಿದ್ದಿದೆ. ಟ್ರಾಕ್ಟರ್ ಟ್ರಾಲಿ ಒಳಗೆ ಇದ್ದ ಸುಮಾರು ಇಪ್ಪತ್ತು ಜನರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಕುಮಾರಪಟ್ಟಣಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”