ರಾಣೆಬೆನ್ನೂರು: ಜೀ ಕನ್ನಡ ಸುದ್ದಿ ವಾಹಿನಿ ಹಾಗೂ ಆನಿಲ್ಪ್ ತಂಡದ ಸಹಭಾಗಿತ್ವದಲ್ಲಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆಯ, ಜೀವನ ಕೌಶಲ ತರಬೇತುದಾರರಾದ ರಾಣೆಬೆನ್ನೂರಿನ ನಂದೀಶ್ ಬಿ. ಶೆಟ್ಟರ್ ಅವರಿಗೆ ಘನ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತ ಅಧಿಕಾರಿಗಳಾದಂತಹ ಡಾ||ಸಂತೋಷ್ ಹೆಗಡೆ ಇವರು ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.
ಸಂಸ್ಥೆಯು ಕಳೆದ 2015 ರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ತಾಲೂಕುಗಳಲ್ಲಿ ಸರ್ಕಾರಿ/ ಅನುದಾನಿತ ಪ್ರೌಢ ಶಾಲೆಗಳ ಎಸ್.ಎಸ್. ಎಲ್. ಸಿ ಮಕ್ಕಳಿಗೆ ಜೀವನ, ಅಧ್ಯಯನ, ಪರೀಕ್ಷೆ ಹಾಗೂ ಮೆದುಳಿನ ನಿರ್ವಹಣೆ ಕುರಿತು ಮನೋಬಲ ಹೆಚ್ಚಿಸುವ ವಿಶೇಷ ನೈಪುಣ್ಯ ಕೌಶಲ ತರಬೇತಿ ನೀಡುತ್ತಿರುವುದನ್ನು ಗುರುತಿಸಿ ಜೀ ಕನ್ನಡ ಸುದ್ದಿ ವಾಹಿನಿ ಹಾಗೂ ಆನಿಲ್ಪ್ ತಂಡ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ.
ಈ ಸಂದರ್ಭದಲ್ಲಿ ಆನಿಲ್ಪ್ ತಂಡದ ಮುಖ್ಯಸ್ಥ ಜಾಕಿರ್ ಹುಸೇನ್ ಹಾಗೂ ಕಾರ್ಯನಿರ್ವಾಹಕಿ ಕು.ಪೂಜಾ ಮತ್ತು ಜಿ ಕನ್ನಡ ಸುದ್ದಿ ವಾಹಿನಿ ವಿಭಾಗದ ದಿವ್ಯ ಆಲೂರ್ ಮತ್ತು ಅತಿಥಿ ವರ್ಗದಲ್ಲಿ ಶಾಂತಮನಿ ಗುರುಗಳು, ಶಿವಗಂಗೆ, ಬಿಗ್ ಬಾಸ್ ರೂಪೇಶ್ ರಾಜಣ್ಣ, ಚಿತ್ರನಟಿ ರಾಗಿಣಿ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದಂತಹ ಬಸವಾನಂದ್ ಬಿ. ಎಸ್, ಹನುಮಂತಪ್ಪ ಎಚ್, ಕೆ, ಎಸ್,ಜೆ ಇಟಗಿ, ಮಹೇಶ್ ಬಿ.ಎಸ್ ಉಪಸ್ಥಿತರಿದ್ದರು.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”