ರಾಣೆಬೇನ್ನೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸೋಮವಾರ ಚಾಲನೆ ಸಿಕ್ಕಿತು.
ನಗರದ ಕುರುಬ ಸಮುದಾಯದ ಮುಖಂಡ ಷಣ್ಮುಖ ಕಂಬಳಿ ಅವರ ಮನೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಇದು ಜಾತಿ ಗಣತಿ ಅಲ್ಲ. ಇದು ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯುವ ಸಮೀಕ್ಷೆ ಎಂದು ಹೇಳಿದರು. ಇದರಿಂದ ನಮ್ಮ ರಾಜ್ಯದ ಹಿಂದುಳಿದ ಜನರ ಸ್ಥಿತಿಗತಿಯನ್ನು ಪರಿಶೀಲಿಸಿ ಅಂತಹ ಸಮುದಾಯದ ಬಗ್ಗೆ ಸರ್ಕಾರದ ಯೋಜನೆ ಹಾಗೂ ಅಂತಹ ಸಮಾಜವನ್ನು ಮುಂದೆ ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಸಮೀಕ್ಷೆ ಸಮಯದಲ್ಲಿ ಸಿಬ್ಬಂದಿ
ಕೈಪಿಡಿ, ಬ್ಯಾಗ್ ಒಳಗೊಂಡ ಕಿಟ್ಗಳೊಂದಿಗೆ ಗಣತಿದಾರರು ಮನೆ–ಮನೆಗೆ ತೆರಳಿ, ಸಮೀಕ್ಷೆ ಕೈಗೊಂಡರು.
ಈ ಸಮಯದಲ್ಲಿ ತಹಸೀಲ್ದಾರ ಆರ್.ಎಚ್. ಭಾಗವಾನ, ಬಿಇಓ ಶ್ಯಾಮಸುಂದರ ಅಡಿಗ, ಬಿಸಿಎಮ್ ಇಲಾಖೆಯ ಎಡಿ ಗಾಯತ್ರಿ, ಮುಖಂಡರಾದ ಕೃಷ್ಣಪ್ಪ ಕಂಬಳಿ, ಮಹೇಶ ಕಂಬಳಿ, ಆನಂದ ಹುಲಬನ್ನಿ, ಸಿದ್ದಪ್ಪ ದೇವರಗುಡ್ಡ, ಬಸವರಾಜ ಕಂಬಳಿ, ಚಂದ್ರಶೇಖರ ಕಂಬಳಿ, ಮೃತ್ಯುಂಜಯ ಗುದಿಗೇರ, ಮರಿಯಪ್ಪ ಪೂಜಾರ, ರವಿ ಹುಲಗಮ್ಮನವರ ಮತ್ತಿತರಿದ್ದರು.

p8a8kl