ಬ್ಯಾಡಗಿ: ಮಲಗಿದ ಸಮಯದಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಮಾಡಿ, ಗಂಡನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ.
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ಬ್ಯಾಡಗಿ: ಮಲಗಿದ ಸಮಯದಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಮಾಡಿ, ಗಂಡನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪವಿತ್ರಾ ರವಿ ಹಡಗಲಿ (29) ಹಾಗೂ ಅವಳ ಗಂಡ ರವಿ ಸಹದೇವಪ್ಪ ಹಡಗಲಿ (38) ಮೃತಪಟ್ಟವರು.
ಪ್ಲಂಬರ್ ಕೆಲಸ ಮಾಡುತ್ತಿದ್ದ ರವಿ ಕಳೆದ 15 ವರ್ಷಗಳ ಹಿಂದೆ ಬ್ಯಾಡಗಿಯ ಪವಿತ್ರಾಳನ್ನು ಮದುವೆಯಾಗಿದ್ದ. ಆಗಾಗ ಹೆಂಡತಿ ಮನೆ ಮತ್ತು ಗಂಡನನ್ನು ಬಿಟ್ಟು ಹೋಗುತ್ತಿದ್ದಳು. ಇದರಿಂದ ಕೋಪಗೊಂಡ ರವಿ ತನ್ನ ಹೆಂಡತಿ ಮಲಗಿದ್ದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಹೆಂಡತಿ ಸತ್ತ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.