ರಾಣೆಬೇನ್ನೂರು: ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವೈದ್ಯನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಣೆಬೇನ್ನೂರು ನಗರದ ಕೋಟೆ ಓಣಿಯಲ್ಲಿ ಶನಿವಾರ ಸಂಜೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಶಹರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ.
ಇಲ್ಲಿಯ ರಾಜೇಶ್ವರಿ ನಗರದ ನಿವಾಸಿ ಡಾ. ಗುರುಮೂರ್ತಯ್ಯ ಗಂಗಾಧರಯ್ಯ ರಾಚೋಟಿಮಠ (46) ಎಂಬುವರ ಮೇಲೆ ಹಲ್ಲೆ ನಡೆಸಿರುವುದು. ಈ ಪ್ರಕರಣಕ್ಕೆ ಸಂಬಂಧಿಸಿ ಮಕ್ಸೂದ್ ಮೊಮೀನ್, ಸೈಯದ್ ಅಹ್ಮದ್ ಮಕಾಂದಾರ, ಸೈಯದ್ ಹೊನ್ನಾಳಿ, ಜಾಫರಸಾಧೀಕ್ ಕಿಲ್ಲೇದಾರ, ಅಬ್ದುಲ್ ಮೊನಾಪ್ ಮೊಮೀನ್ ಸೇರಿ 20ರಿಂದ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ಡಾ. ಗುರುಮೂರ್ತಯ್ಯನ ಕ್ಲಿನಿಕಗೆ ನುಗ್ಗಿ ಇಸ್ಲಾಂ ಧರ್ಮದ ಬಗ್ಗೆ ಅಗೌರವವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೆ ವೈದ್ಯನ ಕ್ಲಿನಿಕ್ ಎದುರು ನಿಲ್ಲಿಸಿದ್ದ ಇಲೆಕ್ಟ್ರಿಕಲ್ ಬೈಕ್ ಎತ್ತಿ ಬಿಸಾಕಿದ್ದು ಅದು ಕೂಡ ಬೆಂಕಿ ಹತ್ತಿ ಉರಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಶಹರ ಠಾಣೆ ಪೊಲೀಸರು ವೈದ್ಯನನ್ನು ರಕ್ಷಣೆ ಮಾಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆತಂದಿದ್ದಾರೆ.
ವೈದ್ಯನ ವಿರುದ್ಧ ದೂರು…
ಮಹ್ಮದಜಾರ್ ಖಲೀಲಅಹ್ಮದ್ ಮೊಮೀನ್ (37) ಎಂಬುವನು ವೈದ್ಯನ ಮೇಲೆ ಪ್ರತಿದೂರು ನೀಡಿದ್ದಾನೆ. ನನ್ನ ಅಕ್ಕನ ಮಗನನ್ನು ವೈದ್ಯನ ಬಳಿ ತೋರಿಸಲು ಹೋದಾಗ “ನಮ್ಮ ಸಂಬಂಧಿಕರಿಗೆ ಪಹಲ್ಗಗಾಮಲ್ಲಿ ಮುಸ್ಲಿಮರು ಹೊಡೆದಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುತ್ತಾರೆ’ ಅಲ್ಲದೇ ಹತ್ತು-ಇಪ್ಪತ್ತು ಮಕ್ಕಳನ್ನು ಹಡಿತೀರಿ ಎಂಬುದು ಸೇರಿ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ’ ಎಂದು ದೂರಿನಲ್ಲಿ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.