ರಾಣೆಬೆನ್ನೂರ: ಪೌರಕಾರ್ಮಿಕರು ಸರಾಯಿ ಗುಟ್ಕಾ ಸೇರಿದಂತೆ ಇತರ ದುಶ್ಚಟಗಳಿಂದ ದೂರವಿರಬೇಕು. ಇದರಿಂದ ನಿಮಗೂ ಹಾಗೂ ನಿಮ್ಮನ್ನು ನಂಬಿದ ಗಂಡ, ಹೆಂಡತಿ ಮಕ್ಕಳಿಗೂ ಕ್ಷೇಮ ಎಂದು ಪೌರಾಯುಕ್ತರಾದ ಎಫ್.ಐ.ಇಂಗಳಗಿ ಹೇಳಿದರು.
ಶನಿವಾರ ನಗರದ ಆಂಗ್ಲೋ ಉರ್ದು ಮೈದಾನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಪ್ರದಾಯದಂತೆ ಶಿಕ್ಷಕರ, ಪೋಷಕರ, ಮಕ್ಕಳ, ಸಾಕ್ಷರತಾ ಸೇರಿದಂತೆ ಇತರ ದಿನಾಚರಣೆಯನ್ನು ಹೇಗೆ ಮಾಡುತ್ತೇವೆಯೋ ಹಾಗೆಯೇ ಪೌರಕಾರ್ಮಿಕರ ಮಹತ್ವ ಅರಿಯಲು ಪ್ರತಿ ವರ್ಷ ಈ ದಿನಾಚರಣೆ ಮಾಡಲಾಗುತ್ತಿದ್ದು, ಅಂದು ಅವರಿಗಾಗಿ ಮನರಂಜನೆ, ಕ್ರೀಡೆ, ಸನ್ಮಾನ ಸೇರಿದಂತೆ ಇತರ ಕಾರ್ಯಕ್ರಮ ಗಳನ್ನು ಕಲ್ಪಿಸಲಾಗುವುದು ಎಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ
ಶ್ರಮಿಕ ಜೀವಿಗಳಾಗಿರುವ ಪೌರಕಾರ್ಮಿಕರು ನಗರದ ಸ್ವಚ್ಛತೆಯ ಹರಿಕಾರರಾಗಿದ್ದಾರೆ ಹಾಗೂ ನಗರದ ಸೌಂದರ್ಯಿಕರಣಕ್ಕೆ ಕಾರಣೀಭೂತರಾಗಿದ್ದಾರೆಂದು ಅಭಿಪ್ರಾಯಪಟ್ಟರು. ಪೌರಕಾರ್ಮಿಕರಿಲ್ಲದೆ ನಗರದ ಸ್ವಚ್ಛತೆ ಹಾಗೂ ಸೌಂಧರ್ಯಿಕರಣ ಅಸಾಧ್ಯ , ಅಂತಹ ಜವಾಬ್ದಾರಿಯಲ್ಲಿರುವ ಪೌರಕಾರ್ಮಿಕರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ನಗರಸಭೆಗೆ ಕೀರ್ತಿ ತರಲು ಮುಂದಾಗಬೇಕು ಎಂದರು.
ಪೌರಕಾರ್ಮಿಕರು ಕ್ರಿಕೆಟ್, ವಾಲಿಬಾಲ್, ಗುಂಡು ಎಸೆತ್, ಶಟಲ್ ಕಾಕ್, ಮ್ಯುಸಿಕಲ್ ಚೆರ್ ಹಾಗೂ ವೈಯಕ್ತಿಕ ಕ್ರೀಡೆ ಆಟ ಆಡುವ ಮೂಲಕ ಗಮನ ಸೆಳೆದರು.
ನಗರಸಭೆ ಅಧ್ಯಕ್ಷೆ ಚಂಪಕಾ ಬೀಸಲಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಕರೆಡೇಣ್ಣನವರ, ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಶೇಖಪ್ಪ ಹೊಸಗೌಡ್ರ ಸೇರಿದಂತೆ ಪರಿಸರ ಇಂಜಿನಿಯರ ಮಹೇಶ ಕೋಡಬಾಳ, ಎಇಇ ಎಸ್ ಬಿ ಹಾದಿಮನಿ, ಎಸ್ ಬಿ ಮರಿಗೌಡ್ರ, ಆರೋಗ್ಯ ನಿರೀಕ್ಷಕರಾದ ಮಧುರಾಜ್ ಕಂಬಳಿ, ರಾಜು ಭೋವಿ, ಶೃತಿ ಎಂ, ರಾಘವೇಂದ್ರ ಗಾವಡೆ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಂದಾಯ ನಿರೀಕ್ಷಕ ವಸಂತ, ಮಾರುತಿ ಪಾಟೀಲ ಹಾಜರಿದ್ದರು
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*