ರಾಣೆಬೇನ್ನೂರು: ದೇಶದ ಪ್ರತಿಷ್ಠಿತ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ ಅರಣ್ಯ ಶಾಸ್ತ್ರ ವಿಭಾಗದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಲ್ಲಿ ರಾಣೆಬೇನ್ನೂರ ನಗರದ ವಿದ್ಯಾರ್ಥಿನಿ ದೇಶಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.
ನಗರದ ಮುಖ್ಯ ಪೋಲಿಸ್ ಪೇದೆಯಾಗಿ ಕೆಲಸ ಮಾಡುತ್ತಿರುವ ಸುರೇಶ ನಿಡನೇಗಿಲ ಅವರ ಪುತ್ರಿ ಸುಪ್ರೀಯಾ ನಿಡನೇಗಿಲ ಸಾಧನೆ ಮಾಡಿದ ವಿದ್ಯಾರ್ಥಿ.
ಇವರು ಮಡಿಕೇರಿ ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಈಗ ICAR ಮಂಡಳಿಯಲ್ಲಿ ಉನ್ನತ ವ್ಯಾಸಂಗ ಮಾಡಲಿದ್ದಾರೆ.
ಇವಳ ಸಾಧನೆಗೆ ಕುಟುಂಬಸ್ಥರು ಹಾಗೂ ಪೋಲಿಸರು ಅಭಿನಂದಿಸಿದ್ದಾರೆ

7bvg0k