ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಮತ್ತು‌ ವೃತ್ತ ಲೋಕಾರ್ಪಣೆ ನಾಡಿದ್ದು

ರಾಣೆಬೇನ್ನೂರು: ತಾಲೂಕಿನ ಕುಮಾರಪಟ್ಟಣಂ ಗ್ರಾಮದಲ್ಲಿ  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಹಾಗೂ ವೃತ್ತ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮವು ಮೇ.16 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯವುದು ಎಂದು ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷ‌ ಚಂದ್ರಣ್ಣ ಬೇಡರ ಹೇಳಿದರು.

ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 8 ಗಂಟೆಗೆ ತಾಲೂಕಿನ ಕವಲೆತ್ತು, ನಲವಾಗಲ, ಕೋಡಿಯಾಲ ಹೊಸಪೇಟೆ ಗ್ರಾಮಗಳ ಮಹಿಳೆಯರಿಂದ ಕುಂಭಮೇಳವು ಭಾಜ ಭಜಂತ್ರಿ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿಯ ದೇವಸ್ಥಾನದಿಂದ ವಾಲ್ಮೀಕಿ ವೃತ್ತಕ್ಕೆ ಆಗಮಿಸುವುದು ಎಂದರು.

ಬೆ.9ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಯ ಪುತ್ಥಳಿ ಲೋಕಾರ್ಪಣೆ ಹಾಗೂ ಕಳಸಾರೋಹಣವು ನಡೆಯುವುದು. ಈ ಧಾರ್ಮಿಕ ಕಾರ್ಯಕ್ರಮಗಲ ದಿವ್ಯ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸಾನಿದ್ಯವಹಿಸುವರು. ಹರಿಹರ ಪಂಚಮಸಾಲಿ ಪೀಠದ ವಚನಾನನಂದ ಶ್ರೀಗಳು, ಕಾಗಿನೆಲೆ ಪೀಠದ ನಿರಂಜನಾನಂದ ಶ್ರೀಗಳು, ಕೊಡಿಯಾಲ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳು, ಐರಣಿ ಹೊಳಿಮಠದ ಬಸವರಾಜ ದೇಶಿಕೇಂದ್ರ ಶ್ರೀಗಳು, ನರಸೀಪುರ ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು ಸಮ್ಮುಖವಹಿಸುವರು ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಅದ್ಯಕ್ಷತೆವಹಿಸುವರು, ಶಾಸಕ ಪ್ರಕಾಶ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ಸತೀಶ ಜಾರಕಿಹೊಳಿ, ಕೆಎನ್ ರಾಜಣ್ಣನವರ, ಸಂಸದ ಬಸವರಾಜ ಬೊಮ್ಮಾಯಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಆರ್ ಶಂಕರ, ಬಿ ಶ್ರೀರಾಮುಲು, ರಾಜು ಗೌಡರು, ಬಿ ಪಿ ಹರೀಶ ಸೇರಿದಂತೆ ಹಾಲಿ ಮಾಜಿ ಸಚಿವರು ಶಾಸಕರು ಅನೇಕ ಗಣ್ಯರು ಆಗಮಿಸುವರು ಹೆಚ್ಚಿನ ಸಂಖ್ಯೆಯಲ್ಲಿ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಚಂದ್ರಣ ಬೇಡರ ವಿನಂತಿಸಿದರು. ರೈತ ಮುಖಂಡ ರವೀಂದ್ರಗೌಡ ಪಾಟೀಲ, ಕರಬಸಪ್ಪ ಕೂಲೇರ, ಶಿವಕುಮಾರ ಓಲೇಕಾರ, ಮೌನೇಶ ತಳವಾರ, ಹರಿಹರಗೌಡ ಪಾಟೀಲ, ರಾಘು ಕಮ್ಮಾರ, ಸದಾಶಿವ ಎರೇಶೀಮಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!