ರಾಣೆಬೇನ್ನೂರು: ನಗರದ ಸಿದ್ದಗಂಗಾ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ನಾಗರಾಜ ಎಸ್.ಕೆ ಅವರಿಗೆ ಪ್ರಸಿದ್ಧ ‘ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಮಂತ್ರಾಲಯದಲ್ಲಿ ಇತ್ತೀಚೆಗೆ ನಡೆದ ರಾಯರ ವರ್ಧಂತಿ ಮಹೋತ್ಸವದ ಗುರು ವೈಭವೋತ್ಸವ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಬುಧೇಂದ್ರ ತೀರ್ಥರ ಸಾನಿಧ್ಯ ಹಾಗು ಸ್ಫೆಸ್ ಮೀಡಿಯಾದ ಸಹಯೋಗದೊಂದಿಗೆ ನಡೆದ ‘ಮರಳಿ ಸಂಸ್ಕೃತಿಗೆ’ ಕಾರ್ಯಕ್ರಮದಲ್ಲಿ ಡಾ.ನಾಗರಾಜ ಎಸ್.ಕೆ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಪ್ರಶಸ್ತಿಯನ್ನು ಈ ಹಿಂದೆ ಡಾ.ರಾಜ್ಕುಮಾರ್, ರಜನಿಕಾಂತ್, ಸುಧಾಮೂರ್ತಿ, ಶಿವ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಮೇಶ ಅರವಿಂದ ಸೇರಿದಂತೆ ಅನೇಕ ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅದರಂತೆ ರಾಣೆಬೇನ್ನೂರು ನಗರದಲ್ಲಿ ವೈದ್ಯಕೀಯ ಸೇವೆ ಹಾಗೂ ಸಮಾಜ ಸೇವೆಯಲ್ಲಿ ಸುಮಾರು ಹತ್ತಾರು ವರ್ಷಗಳಿಂದ ತಮ್ಮದೇ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಡಾ.ನಾಗರಾಜ ಎಸ್.ಕೆ ಅವರಿಗೆ ಈ ಬಾರಿ ಮಂತ್ರಾಲಯ ಕ್ಷೇತ್ರದ ಸುಬುಧೇಂದ್ರ ತೀರ್ಥರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”