ರಾಣೆಬೇನ್ನೂರು: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅಕ್ರಮ ಪ್ರವೇಶ ಮಾಡಿ ಬಾಲಕರಿಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಹಿನ್ನಲೆ ಬಾಲಕರಿಬ್ಬರಿಗೆ(ವಯಸ್ಸಿನವರು ಈಗ) ನ್ಯಾಯಾಲಯವು ಇಪ್ಪತೈದು ವರ್ಷಗಳ ಕಾಲ ಜೈಲು ಹಾಗೂ ಪ್ರತಿಯೊಬ್ಬರಿಗೂ ಮೂರು ಲಕ್ಷ ದಂಡ ಹಾಗೂ ಸರ್ಕಾರದಿಂದ ನೊಂದವರ ಪರಿಹಾರದ ಯೋಜನಡಿ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹಾವೇರಿ ಅಪರ ಜಿಲ್ಲಾ ಸತ್ರ ನ್ಯಾಯಲಯ ಎಫ್.ಟಿ.ಎಸ್.ಸಿ-1 ರ ನ್ಯಾಯಧೀಶರಾದ ಶ್ರೀನಿಂಗೌಡ ಪಾಟೀಲ ಮಹತ್ವದ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ..
ರಾಣೆಬೇನ್ನೂರು ನಗರದ ಮೃತ್ಯುಂಜಯ ನಗರದಲ್ಲಿ ನ.19,2016 ರಂದು ಇಬ್ಬರು ಬಾಲಕರು(ಈಗ ವಯಸ್ಸಿನವರು) ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಲಕಿಯನ್ನು ಸ್ಟೋರ್ ರೂಂಗೆ ಕರೆದುಕೊಂಡು ಹೋಗಿ ಇಬ್ಬರು ಅತ್ಯಾಚಾರ ಮಾಡಿ ನಂತರ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ನಂತರ ಶಹರ ಠಾಣೆ ಪೋಲಿಸರ ತನಿಖೆ ಕೈಗೊಂಡ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ಬಂಧಿಸಿ ಬಾಲಕರ ಮೇಲೆ ಕಲಂ-376-ಡಿ, 302, 450 ಸಹಕಲಂ 34, ಐಪಿಸಿ ಕಲಂ 4, 6, 12 ಪೋಕ್ಸೋ ಕಾಯ್ದೆ ಅಡಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ಸಿಪಿಐ ಕುರಬಗಟ್ಟಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಸುಮಾರು ಎಂಟು ವರ್ಷಗಳ ಕಾಲ ವಿಚಾರಣೆಯ ನಂತರ ಇದೀಗ ಮಾನ್ಯ ನ್ಯಾಯಾಲಯ ತೀರ್ಪು ನೀಡಿದೆ.
ಈ ಒಂದು ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಜಯಕುಮಾರ ಪಾಟೀಲ ಅಭಿಯೋಜಕರಾಗಿ ವಾದ ಮಂಡಿಸಿದರು.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”