ರಾಣೆಬೇನ್ನೂರು: ತಾಲೂಕಿನ ಆರೇಮಲ್ಲಾಪುರ-ಐರಣಿ ಹತ್ತಿರವಿರುವ ಬೆಟ್ಟಮಲ್ಲಪ್ಪನ ಗುಡ್ಡವನ್ನು ಪ್ರವಾಸಿ ತಾಣವಾಗಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಹೇಳಿದರು.
ಶುಕ್ರವಾರ ಬೆಳಿಗ್ಗೆ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಜಿಲ್ಲಾಧಿಕಾರಿ ದಾನಮ್ಮನವರ ಜತೆ ಬೆಟ್ಟ ಮಲ್ಲಪ್ಪನ ಗುಡ್ಡಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.
ತಾಲೂಕಿನಲ್ಲಿ ಐತಿಹಾಸಿಕ ಸ್ಥಳಗಳಿದ್ದು ಈ ಭಾಗದ ಜನರ ಹೆಮ್ಮೆಯ ಕೇಂದ್ರವಾಗಿವೆ. ಆದರೆ ಕಳೆದ ಐವತ್ತು ಇಂತಹ ಸ್ಥಳಗಳು ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳು, ಸಾರಿಗೆ ವ್ಯವಸ್ಥೆ ಕಾಣದೆ ಹಿನ್ನಡೆಯಾಗಿವೆ.
ಈ ಹಿನ್ನೆಲೆ ಮಾನ್ಯ ಶಾಸಕರಾದ ಪ್ರಕಾಶ ಕೋಳಿವಾಡ ಅವರು ನನ್ನ ಬಳಿ ಬಂದು ಕ್ಷೇತ್ರದ ಪ್ರವಾಸಿ ತಾಣಗಳು ಹಾಗೂ ಪ್ರವಾಸೋದ್ಯಮ ಬಗ್ಗೆ ಚರ್ಚೆ ನಡೆಸಿ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ ಇವತ್ತು ಸ್ಥಳಗಳನ್ನು ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ ಎಂದರು.
ತಾಲೂಕಿನ ಐರಣಿ ಭಾಗದ ಬೆಟ್ಟ ಮಲ್ಲಪ್ಪನ ಗುಡ್ಡಕ್ಕೆ ಭೇಟಿ ನೀಡಿದಾಗ ಅತ್ಯಂತ ಉಲ್ಲಾಸ, ಸುಂದರವಾದ ತಾಣವಾಗಿದೆ. ಇದನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಪ್ರವಾಸೋದ್ಯಮ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಅ.15 ರಂದು ಬೆಟ್ಟಮಲ್ಲಪ್ಪನ ಗುಡ್ಡಕ್ಕೆ ಹೋಗಲು ಅರಣ್ಯ ಇಲಾಖೆಯ ವತಿಯಿಂದ ಹತ್ತು ಜೀಪಗಳ ಮೂಲಕ ಸಾರಿಗೆ ವ್ಯವಸ್ಥೆ ಮಾಡಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುವುದು. ಮುಂದಿನ ದಿನಗಳಲ್ಲಿ ಅಲ್ಲಿ ನೇಚರ್ ಕ್ಯಾಂಪ ಮಾಡಲಾಗುವುದು ಎಂದು ತಿಳಿಸಿದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ