ರಾಣೆಬೇನ್ನೂರು: ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಅಂದರ್-ಬಾಹರ್ ಇಸ್ಪೀಟು ಆಡುತ್ತಿದ್ದ ಅಡ್ಡೆ ಮೇಲೆ ಹಲಗೇರಿ ಪೋಲಿಸರು ದಾಳಿ ಮಾಡಿ ಅಪಾರ ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಗೋವಿಂದಪ್ಪ ತಳವಾರ ಎಂಬುವರು ಕಣದಲ್ಲಿ ತಮ್ಮ ಪಾಯ್ದೆಗಾಗಿ ಹಣ ಪಟಣಕ್ಕಿಟ್ಟು ಅಂದರ್ -ಬಾಹರ್ ಆಟವಾಡುತ್ತಿದ್ದರು ಖಚಿತ ಮಾಹಿತಿ ಮೇರೆಗೆ ಹಲಗೇರಿ ಪಿಎಸ್ಐ ಪರಶುರಾಮ ಲಮಾಣಿ ದಾಳಿ ಮಾಡಿ ಹಣ ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಜೋಯಿಸರಹರಳಹಳ್ಳಿ ಗ್ರಾಮದ ಕರಿಯಪ್ಪ ಸಿದ್ದಪ್ಪ ಮಕರಿ, ಕರಿಬಸಪ್ಪ ಮಳಿಯಪ್ಪ ಹೊಟ್ಟಿಗೌಡ್ರು, ಮಹಾಂತೇಶ ನೀಲಪ್ಪ ತಳಗೇರಿ, ಹೊನ್ನಪ್ಪ ಹನುಮಂತ ತಳವಾರ, ನಿಂಗಪ್ಪ ತಳಗೇರಿ, ಮಲ್ಲಪ್ಪ ತಳಗೇರಿ, ಹಜರತ್ ಅಲಿ ಹೊಂಡದ, ಪ್ರದೀಪ್ ಬಾರ್ಕಿ, ಗುರುರಾಜ ಮುದ್ದಪ್ಪಳವರ ಎಂಬುವರು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
More Stories
ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.