ರಾಣೆಬೇನ್ನೂರು: ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳವ ಆಸೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಪರಿಣಾಮ ದೇಶದ ಜನರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ಚುನಾವಣೆಗೆ 35ಸಾವಿರ ಖರ್ಚು ಮಾಡುವ ಬದಲಿಗೆ ಲಕ್ಷಾಂತರ ಖರ್ಚು ಮಾಡಿದರು. ಕೋರ್ಟ್ ನ್ಯಾಯಧೀಶ ಸಿಂಹ್ ಅವರು ನೇತೃತ್ವದಲ್ಲಿ ಅಲ್ಲಿ ನ್ಯಾಯ ಸೋಲನ್ನು ಅನುಭವಿಸಲಾಯಿತು. ಸುಪ್ರಿಂಕೊರ್ಟ್ ತೀರ್ಪನ್ನು ಸಹ ಕಾಣೆ ಮಾಡಿದರು. ರಾಜೀನಾಮೆ ನೀಡುವ ಬದಲು ತುರ್ತು ಪರಿಸ್ಥಿತಿ ಹೇರುವ ಕಾಯ್ದೆ ತಂದರು. ಇದನ್ನು ಸಹ ಕೋರ್ಟ್‍ನಲ್ಲಿ ಪ್ರಶ್ನೆ ಮಾಡುವಂತಿಲ್ಲ ಎಂದರು.
ದೇಶದ ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ಸ್ಪೀಕರ್ ಅವರ ಚುನಾವಣೆಯನ್ನು ಯಾರು ಪ್ರಶ್ನಿಸುವ ಅಧಿಕಾರವನ್ನು ತಂದರು. 38 ಹಾಗೂ 39ವಿದೇಯಕ ತಿದ್ದುಪಡಿ ಮಾಡಿ ಅಧಿಕಾರ ನಡೆಸಿದರು. ಒಂದೇ ದಿನದಲ್ಲಿ 15 ರಾಜ್ಯಗಳು ಇದಕ್ಕೆ ಸಹಕಾರ ನೀಡಿದವು. ಮುಂದಿನ ಸೋಮವಾರ ಬರುವ ನ್ಯಾಯವನ್ನು ತೀರ್ಪನ್ನು ತಡೆಯಲು ಶನಿವಾರ ತಿದ್ದುಪಡಿ ಮಾಡಿದರು. ಸಂವಿಧಾನ ಶೇ.60 ಭಾಗವನ್ನು ರಿರೈಟ್ ಮಾಡಿದರು. 21 ತಿಂಗಳಲ್ಲಿ 45 ಸುಗ್ರಿವಾಜ್ಞೆ ಕಾಯ್ದೆಗಳನ್ನು ತಂದರು. ಇದರ ಬಗ್ಗೆ ಮಾತನಾಡುವರನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದರು. ಕಾನೂನು ತಿರುಚುವ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದರು. 2ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಬಲವಂತದಿಂದ ಸಂತಾನಹರಣ ಚಿಕಿತ್ಸೆ ಮಾಡಲಾಯಿತು. ನೌಕರರನ್ನು ಸೇವೆಯಿಂದ ತೆಗೆದುಹಾಕಲಾಯಿತು. ಚುನಾಯಿತ ಸರಕಾರಗಳನ್ನು ಕಿತ್ತು ಎಸೆಯಲಾಯಿತು ಎಂದರು.
ದೇಶದ ತುರ್ತು ಪರಿಸ್ಥಿತಿಯಲ್ಲಿ ಮೂರು ದಿನಗಳ ಕಾಲ ಪತ್ರಿಕೆಗಳು ಸಹ ಮುದ್ರಣವಾಗದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ರಾಮಕೃಷ್ಣ ಹೆಗಡೆ, ಅದ್ವಾನಿ ಸೇರಿದಂತೆ ಅನೇಕರು ಜೈಲು ವಾಸ ಅನುಭವಿಸಿದರು. ಹಂದಿಗಳು ಇರದಂತಹ ಸ್ಥಿತಿಯಲ್ಲಿ ಅವರನ್ನು ಇರಿಸಿದರು. ದೇಶದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಇದನ್ನು ನೆನಸಿಕೊಳ್ಳಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ದವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಇದರ ಬಗ್ಗೆ ಜನರಿಗೆ ತಿಳಿಸಿ ಪ್ರಜಾಪ್ರಭುತ್ವದ ಉಳಿಸಿ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಾನು ಹಾಗೂ ಅನಂತಕುಮಾರ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಇದರ ಬಗ್ಗೆ ಹೋರಾಟ ಮಾಡೋಣ ತೀರ್ಮಾನ ಮಾಡಲಾಯಿತು. ಇಂದಿರಾ ಅಂದರೇ ಅಂದರ ಆಗುತ್ತಿದ್ದರು. ನಾವು ರಸ್ತೆ ತಡೆ ಮಾಡಿದ ಸಮಯದಲ್ಲಿ ಕೆಲವರು ಬಸ್‍ಗೆ ಬೆಂಕಿ ಹಚ್ಚಿದರು. ಅದು ದೇಶದಲ್ಲಿ ದೊಡ್ಡ ಸುದ್ದಿಯಾಯಿತು. ಪಾರ್ಲಿಮೆಂಟ್ ಚರ್ಚೆಯಾಗದೇ ರಾತ್ರಿ ಸಹಿ ಹಾಕಿಸಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಅಡ್ವಾನಿ, ಯಡಿಯೂರಪ್ಪ, ವಾಜಪೇಯಿ ಜೈಲಿನಲ್ಲಿದ್ದರು. ಹೇಳದೇ ಕೇಳದೆ ಜೈಲು ಹಾಕುವ ಪರಿಸ್ಥಿತಿ ತಂದರು. ಆರ್ ಎಸ್‍ಎಸ್ ಹಾಗೂ ಜನಸಂಘದ ಕಾರ್ಯಕರ್ತರ ಮೇಲೆ ಹೆಚ್ಚು ಕೇಸ್ ದಾಖಲು ಮಾಡಿದರು. ಇಂದಿನ ಪ್ರಧಾನಿ ಅವರು ಅಂದಿನ ಸ್ವಯಂ ಸಂಘದ ಪ್ರಚಾರಕರು. ಗುಲಾಮಗಿರಿ ಕಾಂಗ್ರೆಸ್ ಅಲ್ಲಿ ಆಳವಾಗಿದೆ. ಸಿದ್ದರಾಮಯ್ಯ ಅವರು ತುರ್ತು ಪರಿಸ್ಥಿತಿಯಲ್ಲಿ ಎಲ್ಲಿದ್ದರು. ಅಧಿಕಾರದ ಆಸೆಗಾಗಿ ಕುಟುಂಬದ ರಕ್ಷಣೆಗೆ ನಿಂತಿದ್ದಾರೆ. ಇಂತವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ತುಷ್ಟಿಕರಣ ರಾಜಕಾರಣ ಮಾಡಲು ಹೊರಟವರು ಇವರು. ಸಿದ್ದರಾಮಯ್ಯ ಅವರೇ ನಿಮಗೇ ಅಂಬೇಡ್ಕರ್ ಸಂವಿಧಾನ ಬೇಕಾ ಇಂದಿರಾ ಗಾಂಧಿ ಸಂವಿಧಾನ ಬೇಕಾ ಎಂದು ಪ್ರಶ್ನಿಸಿದರು. ಅಧಿಕಾರ ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನಪರ ಕೆಲಸಗಳು ಕೈಹಿಡಿಯುತ್ತವೆ. 2026ಕ್ಕೆ ಮಧ್ಯಂತರ ಚುನಾವಣೆ ಬಂದು ಕಮಲ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕ ಅರುಣಕುಮಾರ ಪೂಜಾರ, ತುರ್ತು ಪರಿಸ್ಥಿತಿ 50 ವರ್ಷ ರಾಜ್ಯ ಸಮಿತಿ ಸಂಚಾಲಕ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಮಯದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತಾಂಬೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
—
More Stories
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು ಮೇಳ.
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!
ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.