ರಾಣೆಬೇನ್ನೂರು: ತಾಲೂಕಿನ ಚಿಕ್ಕಮಾಗನೂರು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಮೇಲ್ವರ್ಗದ ಜನರಿಂದ ನಿರಂತರ ದೌರ್ಜನ್ಯ ನಡೆಯುತ್ತಿದ್ದರು ಸರ್ಕಾರ ಹಾಗೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೆ ಸರಿ.
ಗ್ರಾಮದಲ್ಲಿ ಸುಮಾರು ನೂರು ಕುಟುಂಬ ಪರಿಶಿಷ್ಟ ಪಂಗಡ ಕುಟುಂಬಗಳು ಹಾಗೂ ನಲವತ್ತು ಪರಿಶಿಷ್ಟ ಜಾತಿ ಕುಟುಂಬಗಳು ಇವೆ. ಆದರೆ ಇಲ್ಲಿರುವ ಮೇಲ್ವರ್ಗದ ಜನರು ಇವರನ್ನು ಊರಿನ ಯಾವುದೇ ಧಾರ್ಮಿಕ ಹಾಗೂ ಇತರೆ ಗ್ರಾಮದ ವಿಷಯಕ್ಕೆ ಸೇರಿಸಿಕೊಳ್ಳದೆ ಅವರ ಮೇಲೆ ನಿರಂತರ ಜಾತಿ ನಿಂದನೆ ದೌರ್ಜನ್ಯ ನಡೆಯುತ್ತಾ ಬಂದಿದೆ.
ಕಳೆದ ವರ್ಷ ಪರಿಶಿಷ್ಟ ಪಂಗಡದ ಜನರಿಗೆ ಸೇರಿದ್ದ ಜಾಗದಲ್ಲಿ ಸೊಸೈಟಿ ನಿರ್ಮಾಣ ಮಾಡುವ ಮೂಲಕ ಅವರ ಆಸ್ತಿಯನ್ನು ಕಬಳಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತು. ಇದೀಗ ಗ್ರಾಮದಲ್ಲಿ ಸುಮಾರು 25 ಎಕರೆ ಜಮೀನು ಪರಿಶಿಷ್ಟ ಪಂಗಡ ಹಾಗೂ ಜಾತಿಯ ಜನರ ಹೆಸರಿನಲ್ಲಿದೆ. ಅದನ್ನು ಬಿಟ್ಟು ಕೊಡುವಂತೆ ಅಂಗಲಾಚಿದರು ಮೇಲ್ವರ್ಗದ ಜನರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿ ಗ್ರಾಮದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವ ಮೂಲಕ ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ನಾವುಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಗ್ರಾಮದ ಚನ್ನಪ್ಪ ಓಲೇಕಾರ ತಿಳಿಸಿದರು. ತಿಳಿಸಿದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ