ರಾಣೆಬೇನ್ನೂರು: ದೇಶಾದ್ಯಂತ ಇಂದು ಸಂವಿಧಾನದ ಶಿಲ್ಪಿ, ಭಾರತ ರತ್ನ, ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ ಆದರೆ ರಾಣೆಬೇನ್ನೂರು ನಗರದಲ್ಲಿ ತಾಲೂಕಿನ ಅಧಿಕಾರಿಗಳು ಜಯಂತಿಗೆ ಬಾರದೆ ಅವಮಾನ ಎಸಗಿದ ಘಟನೆ ನಡೆದಿದೆ.
ನಗರದ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಿದ್ದ ಅಂಬೇಡ್ಕರ್ ಜಯಂತಿಗೆ ತಹಸೀಲ್ದಾರ, ತಾಪಂ ಇಓ, ಬಿಇಓ, ಪೌರಾಯುಕ್ತರ ಸೇರಿದಂತೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಿದ್ದರು.
ಆದರೆ ಪ್ರಮುಖ ಇಲಾಖೆ ಅಧಿಕಾರಿಗಳಾದ ಲೋಕೋಪಯೋಗಿ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುಟಿಪಿ, ಕಾರ್ಮಿಕ, ರೇಷ್ಮೆ, ಕೃಷಿ ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ.
ತಾಲೂಕು ಆಡಳಿತ ಎಲ್ಲಾ ಅಧಿಕಾರಿಗಳು ಜಯಂತಿಯಲ್ಲಿ ಭಾಗಿಯಾಗಬೇಕು ಎಂದು ಮಾಹಿತಿ ನೀಡಿದರು ಕೆಲ ಅಧಿಕಾರಿಗಳು ಮಾತ್ರ ಜಯಂತಿಗೆ ಗೈರು ಹಾಜರಾಗಿ ಮನೆಯಲ್ಲಿ ಕೂತಿದ್ದಾರೆ. ಸಂವಿಧಾನದ ಶಿಲ್ಪಿಯ ಜಯಂತಿಗೆ ಅಧಿಕಾರಿಗಳು ಗೈರು ಯಾಕೆ ಆದರೆ ಎಂಬುದನ್ನು ತಹಶಿಲ್ದಾರರ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ದಲಿತ ಮುಖಂಡ ಮೈಲಪ್ಪ ದಾಸಪ್ಪನವರ ಆಗ್ರಹಿಸಿದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ