16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬೊಮ್ಮಾಯಿಗೆ ಮತಗಳ ಸಂಕಟ…! ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಗಡ್ಡದೇವರಮಠ.

  • ಶಿವಕುಮಾರ ಓಲೇಕಾರ

ರಾಣೆಬೇನ್ನೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ರಾಜ್ಯ ಬಿಜೆಪಿ ನಾಯಕರು ಅಳೆದು ತೂಗಿ ಬಿಜೆಪಿ ಹೈ ಕಮಾಂಡ್ ಮೂಲಕ ಹಾವೇರಿ-ಗದಗ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದ್ದು, ಅವರ ಗೆಲುವಿನ ಓಟಕ್ಕೆ ಇದೀಗ ಮತಗಳ ಸಂಕಟ ಎದುರಾಗಿರುವುದು ಕಂಡು ಬಂದಿದೆ.

ಅದರಲ್ಲೂ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರ ಬಸವರಾಜ ಬೊಮ್ಮಾಯಿಗೆ ನೆಚ್ಚಿನ ಕ್ಷೇತ್ರ ಎನಿಸಿಕೊಂಡಿದ್ದು ಹೆಚ್ಚಿನ ಮತಗಳ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬೊಮ್ಮಾಯಿಗೆ  ಇತ್ತೀಚಿನ ಗುಪ್ತಚರ ಮಾಹಿತಿ ಪ್ರಕಾರ ಮತಗಳು ಸಿಗುವುದು ಬಹುತೇಕ ಕಡಿಮೆ ಎಂಬುದು ಅವರಿಗೆ ದೊಡ್ಡ ತೆಲೆ ನೋವು ಆಗಿದೆ.

ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷದ 38 ಸಾವಿರ ಮತಗಳನ್ನು ಹೊಂದಿದ್ದು ಬಹುತೇಕ ಅಹಿಂದ ಮತಗಳ ಸಂಖ್ಯೆ ಹೆಚ್ಚಾಗಿದೆ.ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 71830 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಶಾಸಕರಾಗಿದ್ದಾರೆ.  ಬಿಜೆಪಿ ಸಹ  62030 ಮತಗಳನ್ನು ಪಡೆಯುವ ಮೂಲಕ ಎರಡನೇ ಕುಸಿತ ಕಂಡಿತು.

ಇದೀಗ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ಆದ ಹಿನ್ನೆಲೆ ಅಂದಿನ  NCP ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಆರ್.ಶಂಕರ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಸಹ ಸುಮಾರು 37559 ಮತಗಳನ್ನು ಪಡೆದಿದ್ದರು. ಈಗ ಕಾಂಗ್ರೆಸ್ ಸೇರಿದ ಕಾರಣ ಕ್ಷೇತ್ರದಲ್ಲಿ ಪಕ್ಷಕ್ಕೆ ಆನೆ ಬಲ‌ ಬಂದಾಗಿದೆ.

ಅದರ ಜತೆಯಾಗಿ ಬಿಜೆಪಿ ‌ಪಕ್ಷದ ಜತೆ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಂತೋಷಕುಮಾರ ಪಾಟೀಲ ಸುಮಾರು 11395 ಮತಗಳನ್ನು ಹಾಗೂ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದ ಮಂಜುನಾಥ ಗೌಡಶಿವಣ್ಣನವರ 5840 ಮತಗಳನ್ನು ಪಡೆದಿದ್ದರು ಇದೀಗ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದು ಬೊಮ್ಮಾಯಿಗೆ ಸ್ವಲ್ಪ ನಿರಾಳವಾಗಿದೆ.

ಇದರ ಮಧ್ಯೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದಸ್ವಾಮಿ  ಗಡ್ಡದೇವರಮಠ ಅವರು ಶತಾಯಗತಾಯ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳನ್ನು ಪಡೆಯಬೇಕು ಎಂಬ ಹಠದಿಂದ ಬಿಜೆಪಿಗೆ ಲೀಡ್ ನೀಡಿದ್ದ ಬೂತ್ ಗಳಿಗೆ ಕಾಲಿಟ್ಟಿದ್ದು ಬಿಜೆಪಿ ಮತಗಳನ್ನು ಪಡೆಯಲು ಮುಂದಾಗಿರುವುದು ಕಂಡು ಬಂದಿದೆ.

ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ನಡೆದಿದ್ದು ಕ್ಷೇತ್ರದ ಜನರು ಯಾರು ಕೈ ಹಿಡಿತ್ತಾರೆ ನೋಡಬೇಕು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!