ರಾಣೆಬೇನ್ನೂರು: ಮೈಕ್ರೋಫೈನಾನ್ಸರವರು ತಾಲೂಕಿನಲ್ಲಿ ತೆಗೆದುಕೊಂಡು ಸಾಲಗಾರರಿಗೆ ಏನಾದರೂ ಕಿರುಕುಳ ಕೊಟ್ಟರೆ ಯಾವುದೇ ಮುಲಾಜಿಲ್ಲದೆ ನಿಮ್ಮ ಮೇಲೆ ಕೇಸ್ ಹಾಕ್ತೇನಿ ಎಂದು ಶಾಸಕ ಪ್ರಕಾಶ ಕೋಳಿವಾಡರವರು ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ರಾಣೆಬೇನ್ನೂರು ನಗರದ ನಗರಸಭಾ ಸಭಾಭವನದಲ್ಲಿ ಆಯೋಜನೆ ಮಾಡಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾಗೂ ತಾಲೂಕು ಅಧಿಕಾರಿಗಳ ಜತೆ ಸಭೆ ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಆರ್ ಬಿ ಐ ನೊಂದಾಯಿತ 22 ಮೈಕ್ರೋ ಫೈನಾನ್ಸ್ ಕಾರ್ಯ ನಿರ್ವಹಣೆ ಮಾಡುತ್ತಿವೆ. ಆದರೆ ಕೆಲವರು ನೀಡಿದ ಸಾಲವನ್ನು ವಸೂಲಿ ಮಾಡಲು ರಾತ್ರಿ ಸಮಯದಲ್ಲಿ ಮನೆಗೆ ಹೋಗಿ ಟಾರ್ಚರ್ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಅನೇಕ ಜನರು ನನಗೆ ಬಂದು ದೂರು ನೀಡುತ್ತಿದ್ದು, ಬಹಳ ನೊವುಂಟು ಮಾಡುತ್ತಿದೆ. ಆದ ಕಾರಣ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಜನರಿಗೆ ಕಿರುಕುಳ ನೀಡಬಾರದು ಎಂದು ಹೇಳಿದರು.
ಇದನ್ನು ಹೊರತು ಏನಾದರೂ ಕಿರುಕುಳ ನೀಡಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ ಆರ್.ಎಚ್.ಭಾಗವಾನ, ಪೌರಾಯುಕ್ತರರಾದ ಎಫ್.ಐ.ಇಂಗಳಗಿ, ನಗರಸಭೆ ಅಧ್ಯಕ್ಷ ಚಂಪಕಾ ಬೀಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸಿಪಿಐ ಶಂಕರ್, ಪ್ರವೀಣಕುಮಾರ ಹಾಜರಿದ್ದರು.
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.